ಮೈಸೂರು

ಸಿವಿಲ್ ಕಂಟ್ರಾಕ್ಟರ್ ಸಾವು

ಸಿವಿಲ್ ಕಂಟ್ರಾಕ್ಟರ್ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ತನ್ನ ರೂಮಿನಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಶಿವಕುಮಾರ್(45) ಎಂಬವರೇ ಸಾವಿಗೀಡಾದ ವ್ಯಕ್ತಿ. ಮೈಸೂರಿನ ವಿದ್ಯಾವರ್ಧಕ ಬಳಿ ಬಾಡಿಗೆ ರೂಮಿನಲ್ಲಿ ವಾಸವಿದ್ದ ಇವರು ತನ್ನ ಮನೆಯವರಿಗೆ ಜನವರಿ 1 ರಂದು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದರು. ಜನವರಿ 2 ರಂದು ಇವರಿಂದ ಯಾವುದೇ ಕರೆಯೂ ಬಂದಿರಲಿಲ್ಲ. ಮನೆಯಿಂದ ಬಂದಿರುವ ಕರೆಯನ್ನೂ ಇವರು ಸ್ವೀಕರಿಸದ ಕಾರಣ ಅನುಮಾನಗೊಂಡು ಇವರು ವಾಸಿಸುತ್ತಿದ್ದ ರೂಮಿನ ಬಳಿ ಧಾವಿಸಿ ಬಂದು ನೋಡಿದಾಗ ಕೈಯ್ಯಲ್ಲಿ ಸಿಗರೇಟ್ ಹಿಡಿದ ಸ್ಥಿತಿಯಲ್ಲಿಯೇ ಇವರು ಸಾವನ್ನಪ್ಪಿದ್ದಾರೆ.

ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದ್ದು, ಪರೀಕ್ಷೆಯ ನಂತರ ಸತ್ಯಾಂಶ ತಿಳಿಯಬೇಕಿದೆ.

ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: