ದೇಶ

ತ್ರಿಪುರಾದಲ್ಲಿ ಭೂಕಂಪನ: ಓರ್ವ ಮಹಿಳೆ ಸಾವು, ಹಲವಾರು ಮನೆಗಳಿಗೆ ಜಖಂ

ಅಗರ್ತಲ: ಭಾರತ-ಬಾಂಗ್ಲಾ ಗಡಿಗೆ ಹೊಂದಿರುವ ತ್ರಿಪುರಾದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪನದ ಪರಿಣಾಮ ಓರ್ವ ಮಹಿಳೆ ಸಾವನಪ್ಪಿದ್ದು, ಐವತ್ತಕ್ಕೂ ಹೆಚ್ಚು ಮನೆಗಳು ಭಾಗಶಃ ಜಖಂಗೊಂಡಿವೆ.

ರಿಕ್ಟರ್‍ ಮಾಪಕದಲ್ಲಿ 5.7 ರಷ್ಟು ದಾಖಲಾಗಿರುವ ಈ ಕಂಪನದಿಂಗಾಗಿ ಪೂರ್ವೋತ್ತರ ರಾಜ್ಯಗಳ ಹಲವು ಭಾಗದಲ್ಲಿ ಕಂಪನದ ಅನುಭವವಾಗಿದೆ.

ಮಂಗಳವಾರ 2.39ರ ಸುಮಾರಿಗೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ತ್ರಿಪುರಾದ ಉತ್ತರ ಭಾಗದಲ್ಲಿರುವ ಧಲೈ ಎಂಬಲ್ಲಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.

ಧಲೈ ಜಿಲ್ಲೆಯ ಕಮಲ್ಪುರ್ ಎಂಬ ಪ್ರದೇಶದ ಐವತ್ತು ವರ್ಷದ ಎನ್ನುವ ಮಹಿಳೆ ಕಮಲಿನಿ ಖಂದ ಅವರು ಭೂಕಂಪನದ ವೇಳೆ ಉಂಟಾದ ಭಯದಿಂದ ತೀವ್ರ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತ್ರಿಪುರಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಿಳಿಸಿದೆ.

Leave a Reply

comments

Related Articles

error: