ಸುದ್ದಿ ಸಂಕ್ಷಿಪ್ತ

ವಿವಿಧ ಯೋಜನೆ: ಅರ್ಜಿ ಆಹ್ವಾನ

ಮೈಸೂರು,ನ.23-ನಂಜನಗೂಡು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ 2018-19ನೇ ಸಾಲಿಗೆ ವಿವಿಧ ಯೋಜನೆಯಡಿ ಅರ್ಹ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ.

ಉದ್ಯೋಗಿನಿ ಯೋಜನೆಯಡಿ 1 ಲಕ್ಷ ರೂ. ದಿಂದ 3 ಲಕ್ಷ ರೂ. ವರೆಗೆ ಸಾಲವನ್ನು 18 ರ ಮೇಲ್ಪಟ್ಟು 55 ವರ್ಷ ಒಳಗಿನ ವಯೋಮಿತಿ ಪಡೆಯಬಹುದಾಗಿದೆ. 3 ವರ್ಷ ಮೇಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳಿಗೆ ಕಿರು ಸಾಲ ನೀಡಲಾಗುವುದು. ಗುಂಪಿನ ಸದಸ್ಯರೆಲ್ಲಾ ಎರಡು ಉದ್ದೇಶಕ್ಕೆ ಹೈನುಗಾರಿಕೆ ಹೊರತು ಪಡಿಸಿ ಸಾಲವನ್ನು ಪಡೆದು ಆದಾಯ ಉತ್ಪನ್ನ ಚಟುವಟಿಕೆಗೆ ತೊಡಗಿಸಿಕೊಳ್ಳುವುದು.

ಚೇತನ ಯೋಜನೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ಧನ ನೀಡಲಾಗುವುದು. 19 ವರ್ಷ ಮೇಲ್ಪಟ್ಟವರು, ಆಶೋಧಯ ಸಮಿತಿಯಿಂದ ಮತ್ತು ಆಶೋಧಯ  ಅಕಾಡೆಮಿ ಸಂಸ್ಥೆಯಲ್ಲಿ ನೊಂದಣಿಯಾದ ಲೈಂಗಿಕ ಕಾರ್ಯಕರ್ತೆಯರು  ಅರ್ಜಿ ಸಲ್ಲಿಸುವುದು.

ಸಮೃದ್ಧಿ ಯೋಜನೆ ಈಗಾಗಲೇ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಸಾಲಸೌಲಭ್ಯ ನೀಡಲಾಗುವುದು. ವಯೋಮಿತಿ 18 ರಿಂದ 60 ವಯೋಮಿತಿಯಲ್ಲಿರಬೇಕು .ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಪೌರಾಡಳಿತ ಇಲಾಖೆಯಲ್ಲಿ “ಬೀದಿಬದಿ ವ್ಯಾಪಾರಿ”ಎಂದು ನೊಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ಧೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿರವರ ಕಚೇರಿ, ಹುಲ್ಲಹಳ್ಳಿ ರಸ್ತೆ, ನಂಜನಗೂಡು.-571301, ದೂ.ಸಂ. ನಂಜನಗೂಡು-08221-226168 ಅನ್ನು ಸಂಪರ್ಕಿಸಬಹುದು. (ಎಂ.ಎನ್)

 

Leave a Reply

comments

Related Articles

error: