ಮೈಸೂರು

ಕೋ-ಆಪ್ಟೆಕ್ಸ್ ವಸ್ತು ಪ್ರದರ್ಶನಕ್ಕೆ ಚಾಲನೆ

ತಮಿಳುನಾಡಿನ ಕೈಮಗ್ಗ ನೇಕಾರರ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಮೈಸೂರಿನ ಇನ್’ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಆಯೋಜಿಸಿದ್ದ 6 ದಿನಗಳ ಕೋ-ಆಪ್ಟೆಕ್ಸ್ ವಸ್ತುಪ್ರದರ್ಶನಕ್ಕೆ ಬಿಎಸ್‍ಎನ್‍ಎಲ್ ವಿಭಾಗೀಯ ಮುಖ್ಯಸ್ಥ ಶ್ರೀನಿವಾಸನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಕೈಮಗ್ಗ ಉತ್ಪನ್ನಗಳು ಕಡಿಮೆಯಾಗುತ್ತಿವೆ. ಇದರಿಂದ ಕೈಮಗ್ಗ ನೇಕಾರರ ಜೀವನ ದುಸ್ತರವಾಗಿದೆ. ಇಂತಹ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹೆಚ್ಚೆಚ್ಚು ಆಯೋಜಿಸುವುದರಿಂದ ನೇಕಾರರಿಗಲ್ಲದೆ ಗ್ರಾಕರಿಗೂ ಲಾಭವಾಗುತ್ತದೆ. ಅಲ್ಲದೆ ಬೇರೆಡೆ ತಯಾರಾಗುವ ವಿಭಿನ್ನ ಬಟ್ಟೆಗಳು ಒಂದೇ ಕಡೆ ದೊರೆಯುತ್ತವೆ. ಇದರಿಂದ ಗ್ರಾಹಕರಿಗೆ ಆಯ್ಕೆ ಹೆಚ್ಚಿರುತ್ತದೆ. ಹಾಗಾಗಿ ಸಾರ್ವಜನಿಕರು ಇಂತಹ ಪ್ರದರ್ಶನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಿಲ್ಕ್ ಸೀರೆಗಳು, ಕಾಂಚಿಪುರಂ ಅರ್ನಿ, ಕೊಯಮತ್ತೂರು ಸಾಫ್ಟ್ ಸಿಲ್ಕ್, ಡಿಸೈನರ್ ಸೀರೆಗಳು, ಕಾಟನ್ ಸೀರೆಗಳು, ಕೋರಾ ಕಾಟನ್ ಸೀರೆಗಳು, ಬ್ರೈಡ್‍ಗ್ರೂಮ್ ಸೆಟ್, ಬೆಡ್‍ಶೀಟ್, ಪಿಲ್ಲೋ ಕವರ್ಸ್, ಲುಂಗಿ, ಟವಲ್ಸ್, ಕಾರ್ಪೆಟ್ಸ್, ಚೂಡಿದಾರ್ ಮೆಟೀರಿಯಲ್, ನೈಟಿ, ಪೆಟ್ಟಿಕೋಟ್, ರೆಡಿಮೇಡ್ ಶರ್ಟ್ಸ್ ಸೇರಿದಂತೆ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವಿದೆ. ಪ್ರದರ್ಶನ ಜ.9 ರ ವರೆಗೂ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೋ-ಆಪ್ಟೆಕ್ಸ್ ಪ್ರಾದೇಶಿಕ ವ್ಯವಸ್ಥಾಪಕ ಜಿ.ಹೆಚ್. ಕುಲಕರ್ಣಿ, ಸೆಲ್ವರಾಜ್, ಪ್ರಭು ಕಲಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: