ಸುದ್ದಿ ಸಂಕ್ಷಿಪ್ತ

ನ.29 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಮೈಸೂರು,ನ.23-ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀರಕಣ ಮತ್ತು ಕ್ರೀಡಾ
ಇಲಾಖೆ ಸಂಯುಕ್ತಾಶ್ರಯದಲ್ಲಿ ನ.29 ರಂದು ಬೆಳಿಗ್ಗೆ 10ಕ್ಕೆ ಜೆ.ಕೆ.ಮೈದಾನದ ವೈದ್ಯಕೀಯ ಶತಮಾನೋತ್ಸವ ಭವನದಲ್ಲಿ ಇಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಯುವಜನೋತ್ಸವ ಕಾರ್ಯಕ್ರಮದಲ್ಲಿ ನಡೆಸುವ ಸ್ಪರ್ಧೆಗಳು ಕೆಳಕಂಡಂತಿರುತ್ತವೆ. ಶಾಸ್ತ್ರೀಯ ನೃತ್ಯ, (ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಕಥಕ್) 15 ನಿಮಿಷ, ವೈಯಕ್ತಿಕ, ಶಾಸ್ತ್ರೀಯ ವಾದ್ಯ (ಸೀತಾರ್, ಕೊಳಲು, ತಬಲ, ವೀಣೆ, ಮೃದಂಗ), 10 ನಿಮಿಷ, ವೈಯಕ್ತಿಕ, ಹಾರ್ಮೋನಿಯಂ, 10 ನಿಮಿಷ, ವೈಯಕ್ತಿಕ, ಗಿಟಾರ್, 10 ನಿಮಿಷ, ವೈಯಕ್ತಿಕ, ಶಾಸ್ತ್ರೀಯ ಗಾಯನ (ಕರ್ನಾಟಕ ಮತ್ತು ಹಿಂದೂಸ್ಥಾನಿ), 15 ನಿಮಿಷ, ವೈಯಕ್ತಿಕ, ಆಶುಭಾಷಣ (ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ಮಾತ್ರ), 4 ನಿಮಿಷ, ವೈಯಕ್ತಿಕ, ಏಕಾಂಕ ನಾಟಕ (ಹಿಂದಿ ಅಥವಾ ಇಂಗ್ಲೀಷ್ ಭಾಷೆ ಮಾತ್ರ), 45 ನಿಮಿಷ, 12 ಜನರ ತಂಡ, ಜನಪದ ಗೀತೆ, 7 ನಿಮಿಷ , 10 ಜನರ ತಂಡ, ಜನಪದ ನೃತ್ಯ (ಯುವಕ/ಯುವತಿಯರು ಸೇರಿ), 15 ನಿಮಿಷ, 20 ಜನರ ತಂಡ.

ಮೇಲ್ಕಂಡ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ 15 ರಿಂದ 29 ವರ್ಷ ವಯೋಮಿತಿಯೊಳಗಿನ (ದಿನಾಂಕ 31-01-2019ಕ್ಕೆ) ಎಲ್ಲಾ ಯುವಕ/ಯುವತಿಯರು, ವಿವಿಧ ಶಾಲಾ/ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೊಂದಾವಣೆಯಾದ ಯುವಕ ಸಂಘಗಳು, ಯುವತಿ ಮಂಡಳಿಗಳು ಹಾಗೂ ರಾಜೀವ್ ಗಾಂಧಿ ಯುವಶಕ್ತಿ ಸಂಘಗಳ ಪದಾಧಿಕಾರಿಗಳು ತಮ್ಮ ಆಧಾರ್ ಕಾರ್ಡ್, ಗುರುತಿನ ಚೀಟಿ ಮತ್ತು ವಯಸ್ಸಿನ ದೃಢೀಕರಣ ಪತ್ರದೊಂದಿಗೆ ನ.28 ರೊಳಗೆ ದೂ.ಸಂ. 0821-2564179 ರ ಮೂಲಕ ಅಥವಾ ಖುದ್ದಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ಇವರಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ನ.29 ರಂದು ಕಾರ್ಯಕ್ರಮ ನಡೆಯುವ ಸ್ಥಳದಲ್ಲೂ ನೋಂದಣಿ ಮಾಡಿಸಿಕೊಳ್ಳಬಹುದು. ವಿಜೇತ ತಂಡಗಳನ್ನು ರಾಜ್ಯಮಟ್ಟಕ್ಕೆ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸುತ್ತಿರುವುದರಿಂದ ಆಶುಭಾಷಣ ಸ್ಪರ್ಧೆ ಮತ್ತು ಏಕಾಂಕ ನಾಟಕ ಇವುಗಳ ಸ್ಪರ್ಧೆಯನ್ನು ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ನಡೆಸಲಾಗುವುದು.

ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಗಳುಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು. ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು ಮಾತ್ರ ನ.30 ರಿಂದ ಡಿಸೆಂಬರ್ 2 ರವರೆಗೆ ತುಮಕೂರು ಜಿಲ್ಲೆಯಲ್ಲಿ ನಡೆಯಲಿರುವ 2018-19ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂ.ಸಂ. 0821-2564179 ಅನ್ನು ಸಂಪರ್ಕಿಸಬಹುದು. (ಎಂ.ಎನ್)

 

Leave a Reply

comments

Related Articles

error: