ಪ್ರಮುಖ ಸುದ್ದಿ

ಆಂಬಿಡೆಂಟ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣ : ರೆಡ್ಡಿ ಆಪ್ತ ಅಲಿಖಾನ್‌ ತೀವ್ರ ವಿಚಾರಣೆ

ರಾಜ್ಯ(ಬೆಂಗಳೂರು)ನ.24:-  ಆಂಬಿಡೆಂಟ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ  ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿನ್ನೆ ಅಲಿಖಾನ್‌ನನ್ನು ಹಾಜರುಪಡಿಸಿದ ಸಿಸಿಬಿ ಅಧಿಕಾರಿಗಳು  ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಸಿಸಿಬಿಯ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಅಲಿಖಾನ್ ವಿಚಾರಣೆ ನಡೆಯುತ್ತಿದ್ದು, 57 ಕೆಜಿ ಚಿನ್ನ ಎಲ್ಲಿದೆ ಎನ್ನುವುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಆಂಬಿಡೆಂಟ್ ಕಂಪನಿಗೆ ಸಂಬಂಧಪಟ್ಟ ಕೆಲ ಉದ್ಯಮಿಗಳ ವಿಚಾರಣೆಯನ್ನ ಸಿಸಿಬಿ ತಂಡ ಮುಂದುವರೆಸಿದೆ. ಈಗಾಗಲೇ ಕಂಪನಿಯಿಂದ ಹಲವಾರು ಮಂದಿಗೆ ಹಣ ಹೋಗಿರುವುದರಿಂದ ಆ ಹಣವನ್ನು ವಶಪಡಿಸಿಕೊಳ್ಳಲು ಸಿಸಿಬಿ ಹರಸಾಹಸ ಪಡುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: