ಮೈಸೂರು

ನಮ್ಮ ಕಾರು ನಮಗೆ, ಮೇಯರ್ ಕಾರ್ ಮೇಯರ್ ಗೆ : ಶಿಸ್ತು ಪ್ರದರ್ಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು, ನ.24:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಸ್ತು ಪ್ರದರ್ಶಿಸಿದ್ದಾರೆ. ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ತಮ್ಮ ಕಾರಿನಲ್ಲಿ ಬನ್ನಿ ಎಂದು ಕರೆದಾಗ ನಮ್ಮ ಕಾರು ನಮಗೆ, ಮೇಯರ್ ಕಾರ್ ಮೇಯರ್ ಗೆ ಎಂದು ತಮ್ಮ ಕಾರಿನಲ್ಲಿಯೇ ಬಂದರು.

ಮಾಜಿ ಸಿಎಂ ಸಿದ್ದರಾಮಯ್ಯ ರನ್ನು ತಮ್ಮ ಕಾರಿನಲ್ಲಿ ಬನ್ನಿ ಎಂದು ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್ ಏರ್ಪೋರ್ಟ್ ನಲ್ಲಿ ಕರೆದಿದ್ದು, ನಾನು ಈಗ ಸರಕಾರದಲ್ಲಿ ಇಲ್ಲ, ಅದು ಮೇಯರ್ ಕಾರು. ನಿಮ್ಮ ಕಾರಿನಲ್ಲಿ ನೀವು ಬನ್ನಿ, ನಾವು ಯಾವತ್ತೂ ಮೇಯರ್ ಕಾರಿನಲ್ಲಿ ಹೋಗಿಲ್ಲ ಎಂದು  ಶಿಸ್ತು ಪ್ರದರ್ಶಿಸಿ ತಮ್ಮ ಕಾರಿನಲ್ಲಿಯೇ ಹೊರಟು ಬಿಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಬರುವುದಿಲ್ಲ ಎಂದ ಮೇಲೆ ತಮ್ಮ ಕಾರಿನಲ್ಲೇ ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರಯಾಣಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: