
ಪ್ರಮುಖ ಸುದ್ದಿ
ತಂದೆಯ ತಲೆಯನ್ನೇ ಕತ್ತರಿಸಿ ಠಾಣೆಗೆ ತಂದ ಮಗ
ರಾಜ್ಯ(ಮಂಡ್ಯ)ನ.24:- ತಂದೆಯ ತಲೆಯನ್ನೇ ಕಡಿದು ಮಗನೋರ್ವ ಪೊಲೀಸ್ ಠಾಣೆಗೆ ಹಿಡಿದು ತಂದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.
ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೇನಹಳ್ಳಿ ಗ್ರಾಮದಲ್ಲಿ ಯುವಕ ದಯಾನಂದ್ (21) ಎಂಬಾತ ತನ್ನ ತಂದೆ ಮಂಜುನಾಯಕ್ ಅವರ ತಲೆಯನ್ನು ಕತ್ತರಿಸಿ ತಂದು ಕಿಕ್ಕೇರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹೆಚ್ಚಿನ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ. ಆರೋಪಿ ಕಿಕ್ಕೇರಿ ಪೊಲೀಸರ ವಶದಲ್ಲಿದ್ದಾನೆ. (ಕೆ.ಎಸ್,ಎಸ್.ಎಚ್)