ಮೈಸೂರು

ಅಂತರ್ಮನ ಮಂಗಳ ಪ್ರವೇಶೋತ್ಸವ; ಜ.6-7

ಅಂತರ್ಮನ ಮುನಿಶ್ರೀ 108 ಪ್ರಸನ್ನ ಸಾಗರ್‍ಜೀ ಮಹಾರಾಜರ ಅಂತರ್ಮನ ಮಂಗಳ ಪ್ರವೇಶೋತ್ಸವವನ್ನು 7 ವರ್ಷಗಳ ನಂತರ ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಿಗಂಬರ ಜೈನ ಸಮಾಜದ ಎಂ.ಡಿ. ಹರೀಶ್‍ಕುಮಾರ್ ಹೆಗ್ಡೆ ಬುಧವಾರ ಪತ್ರಕರ್ತರ ಭವನದಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.6 ಮತ್ತು 7 ರಂದು ಶ್ರೀಗುರುಭಕ್ತ ಪರಿವಾರ, ಶ್ರೀದಿಗಂಬರ ಜೈನ ಹಾಗೂ ಪದ್ಮಶ್ರೀ ಮಹಿಳಾ ಸಮಾಜಗಳು, ಸಮಸ್ತ ಜೈನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂತರ್ಮನ ಮಂಗಳ ಪ್ರವೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಶುಭೋದಿನಿ ಕನ್ವೆನ್ಷನ್ ಸೆಂಟರ್‍ನಲ್ಲಿ ಸಂಜೆ 4ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಕೃಷ್ಣಪ್ಪ, ಶಾಸಕ ವಾಸು, ಮಹಾಪೌರ ಎಂ.ಜೆ. ರವಿಕುಮಾರ್, ಜೆ.ಎಸ್.ಎಸ್. ವಿದ್ಯಾಪೀಠದ ಸಹಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಹಾಗೂ ಇತರರು ಉಪಸ್ಥಿತರಿರುವರು.

ಅಂದು ಬೆಳಿಗ್ಗೆ 9ಕ್ಕೆ ಅಂತರ್ಮನ 108 ಮುನಿಶ್ರೀ ಪ್ರಸನ್ನ ಸಾಗರ್‍ಜೀ ಮಹಾರಾಜ್ ಅವರನ್ನು ಕೆ.ಆರ್.ಎಸ್. ರಸ್ತೆಯ ರಾಯಲ್ ಇನ್ ಹೋಟೆಲ್‍ನಿಂದ ಶುಬೋಧಿನಿ ಕನ್ವೆನ್ಷನ್ ಸೆಂಟರ್‍ವರೆಗೂ ಸಮಸ್ತ ಜೈನ ಸಮಾಜದವರು ಸಾಂಸ್ಕೃತಿಕ ಕಲಾ ತಂಡ ಹಾಗೂ ಮಂಗಳವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಕರೆತರಲಾಗುವುದು.

ಜ.7ರಂದು ನಡೆಯುವ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ ಉಪಸ್ಥಿತರಿರುವರು.

ಅಂತರ್ಮನ ಮುನಿಶ್ರೀ 109 ಪ್ರಸನ್ನಸಾಗರ್‍ಜೀ ಮಹಾರಾಜ್, 105 ಕ್ಷುಲಕಶ್ರೀ ಪರ್ವಸಾಗರ್‍ಜೀ ಮಹಾರಾಜ್, ಕನಕಗಿರಿ ಶ್ರೀಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮಿ ಹಾಗೂ ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತವಿಜಯಾನಂದತೀರ್ಥ ಸ್ವಾಮಿ ಕಾರ್ಯಕ್ರಮಗಳ ಸಾನಿಧ್ಯ ವಹಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುನಿಲ್ ಕುಮಾರ್, ಸುಧೀರ್‍ಕುಮಾರ್, ಅಭಿಷೇಕ್ ಹೆಗ್ಡೆ ಹಾಗೂ ಅಭಿಜಿತ್ ಹೆಗ್ಡೆ ಉಪಸ್ಥಿತರಿದ್ದರು.

Leave a Reply

comments

Related Articles

error: