ಸುದ್ದಿ ಸಂಕ್ಷಿಪ್ತ

ನ.27 : ನೂತನ ಪದವೀಧರರ ದಿನಾಚರಣೆ

ಮೈಸೂರು,ನ.24:- ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‍ಎಸ್ ಸ್ವಾಯತ್ತ ಕಾಲೇಜಿನಲ್ಲಿ 27-11-2018ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಹನ್ನೊಂದನೆಯ ‘ಪದವೀಧರರ ದಿನಾಚರಣೆ’ಯನ್ನು ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ.

ಮುಖ್ಯಅತಿಥಿಗಳಾಗಿ ಪ್ರೊ. ಬಿ.ಕೆ. ಚಂದ್ರಶೇಖರ್, ವಿಶ್ರಾಂತ ಪ್ರಾಧ್ಯಾಪಕರು, ಐಐಎಂ, ಮಾಜಿ ಸಚಿವರು ಹಾಗೂ ಮಾಜಿ ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ ಇವರು ಭಾಗವಹಿಸುತ್ತಿದ್ದಾರೆ. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಯವರಾದ ಡಾ. ಸಿ.ಜಿ. ಬೆಟಸೂರಮಠರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ

2017-18 ರಲ್ಲಿ ನಡೆದ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಕ್ರಮವಾಗಿ ಉತ್ತೀರ್ಣರಾದ 413 ಸ್ನಾತಕ ಹಾಗೂ 417 ಸ್ನಾತಕೋತ್ತರ ಒಟ್ಟು 830 ಪದವೀಧರರು ಈ ಸಮಾರಂಭದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕಾರ್ಯಕ್ರಮದಲ್ಲಿ ವಿವಿಧ ಕೋರ್ಸುಗಳಲ್ಲಿ ಉನ್ನತಸ್ಥಾನ ಪಡೆದಿರುವ 58 ಪದವೀಧರರನ್ನು ಪುರಸ್ಕರಿಸಲಾಗುವುದು.

ಎಲ್ಲಾ ಪದವೀಧರರಿಗೆ ವಿದ್ಯಾರ್ಥಿಗಳಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಅವರು ಅಂದು ಬೆಳಗ್ಗೆ 9.30 ಗಂಟೆಯೊಳಗೆ ಕಾಲೇಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ. ವಿ. ಸಾಂಬಶಿವಯ್ಯನವರು ಮತ್ತು ಪ್ರಾಚಾರ್ಯರಾದ  ಪ್ರೊ. ಎಂ. ಮಹದೇವಪ್ಪನವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: