ಮೈಸೂರು

ಮಕ್ಕಳ ಹೃದ್ರೋಗ ಸಮಸ್ಯೆ; ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಪ್ರತ್ಯೇಕ ನಿಗಾಘಟಕ

ಮಕ್ಕಳಲ್ಲಿ ಕಂಡುಬರುವ ಹೃದಯ ಸಂಬಂಧೀ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಅನುಭವೀ ತಜ್ಞವೈದ್ಯರ ತಂಡವಿರುವ ಪ್ರತ್ಯೇಕ ನಿಗಾ ಘಟಕ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ರವಿ ತಿಳಿಸಿದರು.

ಮಕ್ಕಳಲ್ಲಿನ ಹೃದಯ ಸಂಬಂಧೀ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಿ ಸ್ಪಂದಿಸುವ ನಿಟ್ಟಿನಲ್ಲಿ ಜೆ.ಎಸ್.ಎಸ್. ಆಸ್ಪತ್ರೆಯು ಮೈಸೂರಿನಲ್ಲಿಯೇ ಪ್ರಪ್ರಥಮವಾಗಿ ಈ ರೀತಿಯ ಸೇವೆ ಆರಂಭಿಸಿದೆ ಎಂದು ಅವರು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಲ್ಲಿ ಅನುವಂಶಿಕವಾಗಿ ಕಂಡು ಬರುವ ಹೃದಯ ಸಂಬಂಧೀ ಕಾಯಿಲೆಯನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಶಸ್ತ್ರ ಚಿಕಿತ್ಸೆ ಹಾಗೂ ಇಂಟರ್‍ವೇನ್ಷನ್ ಮೂಲಕ ಕಳೆದ ಮೂರು ವರ್ಷಗಳಿಂದಲೂ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಪ್ರಸ್ತುತ ಮಕ್ಕಳು ಆರೋಗ್ಯಪೂರ್ಣವಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ ಎಂದರು.

ಮಕ್ಕಳ ಹೃದ್ರೋಗ ತಜ್ಞ ಡಾ.ಅಮಿತ್‍ ಮನಗುಳಿ ಮಾತನಾಡಿ, ಮಕ್ಕಳಲ್ಲಿ ಪದೇ ಪದೇ ಕಾಡುವ ನಿಮೋನಿಯಾ, ಶೀತ, ನೆಗಡಿ, ಕೆಮ್ಮು ಹಾಗೂ ಎದೆಹಾಲು ಕುಡಿಯುವಾಗ ಜೋರಾದ ಉಸಿರಾಟವೂ ಹೃದಯ ಕಾಯಿಲೆಗಳ ಲಕ್ಷಣಗಳಾಗಿದ್ದು ಇಂತಹ ಮಕ್ಕಳನ್ನು ತಜ್ಞರಿಂದ ತಪಾಸಣೆ ನಡೆಸುವುದು ಅತಿ ಅವಶ್ಯವೆಂದರು. ಜೆ.ಎಸ್.ಎಸ್. ಆಸ್ಪತ್ರೆಯು ಯಶಸ್ವಿನಿ ಮತ್ತು ವಾಜಪೇಯಿ ಆರೋಗ್ಯ ಶ್ರೀ ಯೋಜನೆಗಳ ಮಾನ್ಯತೆಯನ್ನು ಹೊಂದಿದೆ ಎಂದರು.

ಹೃದ್ರೋಗಗಕ್ಕೆ ಸಂಬಂಧಿಸಿದಂತೆ ಸಲಹೆ, ಆಧುನಿಕ ಉಪಕರಣಗಳಿಂದ ಡಯೋಗ್ನೋಸ್ಟಿಕ್ ಇಕೋಕಾರ್ಡಿಯಾಗ್ರಫಿ, ಕಾರ್ಯನಿರ್ವಹಣಾ ಕಾರ್ಡಿಯಾಕ್ ಕೆಥೆಟರೈಸೇಷನ್ ಸೇರಿದಂತೆ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗಳಾದ ಎ.ಎಸ್.ಡಿ. ಮತ್ತು ವಿ.ಎಸ್.ಡಿ ಕ್ಲೋಷರ್, ಪಿಡಿಎಲಿಗೇಷನ್ ಹಾಗೂ ಇತರೆ ಚಿಕಿತ್ಸೆಗಳನ್ನು ನುರಿತ ವೈದ್ಯರು ಯಶಸ್ವಿಯಾಗಿ ನೀಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಹೃದ್ರೋಗ ತಜ್ಞ ಡಾ.ನಾಗರಾಜ ದೇಸಾಯಿ, ಡಾ.ಜಗದೀಶ್, ಡಾ.ಸುನಿಲ್‍ ಕುಮಾರ್ ಹಾಗೂ ಮಕ್ಕಳ ಹೃದ್ರೋಗ ತಜ್ಞ ಡಾ.ಸುಜಯ್ ಉಪಸ್ಥಿತರಿದ್ದರು.

Leave a Reply

comments

Related Articles

error: