ಮೈಸೂರು

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಪ್ರತಿಭಾವಂತ ಮಕ್ಕಳಿಗೆ “ವಿಪ್ರ ಕಿಶೋರ ಪ್ರತಿಭೆ” ಪ್ರಶಸ್ತಿ ನೀಡಿ ಸನ್ಮಾನ

ಮೈಸೂರು,ನ.24:- ವಿಪ್ರ ಸಹಾಯವಾಣಿ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಚಾಮುಂಡಿಪುರಂ ನಲ್ಲಿರುವ ಬ್ರಾಹ್ಮಣ ಸಂಘದ ಕಚೇರಿಯಲ್ಲಿ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಪ್ರತಿಭಾವಂತ ಮಕ್ಕಳಿಗೆ “ವಿಪ್ರ ಕಿಶೋರ ಪ್ರತಿಭೆ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇಂದು ನಡೆದ ಕಾರ್ಯಕ್ರಮದಲ್ಲಿ ಕಿಶೋರ ಪ್ರತಿಭೆಗಳಾದ ಸ್ಕಂದ.ಎನ್ (ಸಂಗೀತ),ಸ್ಪೂರ್ತಿ(ಭರತನಾಟ್ಯ) ವರ್ಚಸ್.ವಿ(ಮೃದಂಗವಾದನ),ದೀಷ್ಣಾ ಭಾರದ್ವಾಜ್ (ನೃತ್ಯ),ರಕ್ಷಾ(ಸುಗಮ ಸಂಗೀತ),ಸುಮುಖ್ ಎಸ್ ರಾಜರ್ಷಿ (ಡ್ರಮ್ ವಾದನ),ಚಿನ್ಮಯ್ ಆತ್ರೇಯ(ಕೊಳಲು ವಾದನ),ಶ್ರೀಯ.ಜಿ(ಭರತನಾಟ್ಯ),ಆದಿತ್ಯ ಭಾರದ್ವಾಜ(ಚಿತ್ರಕಲೆ), ರಾಘವ ಭಾರದ್ವಾಜ್( ಕ್ರೀಡಾ,ಧಾರ್ಮಿಕ),ಸುಹಾಸ್ ಕೌಶಿಕ್( ಕರ್ನಾಟಕ ಶಾಸ್ತ್ರೀಯ ಸಂಗೀತ),ಅನಘ(ಚದುರಂಗ) ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ನೆರವೇರಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಡಾ.ರಘುರಾಂ ವಾಜಪೇಯಿ ಸಮಾಜದಲ್ಲಿ ಮಕ್ಕಳನ್ನು ಯಾವ ಸಂಸ್ಕಾರದಲ್ಲಿ ಬೆಳೆಸುತ್ತಿದ್ದೇವೆ ಎಂಬುದರ ಮೇಲೆ ಈ ಸಮಾಜ ನಿಂತಿದೆ. ಆದ್ದರಿಂದ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಹ ಕೆಲಸವನ್ನು ಪೋಷಕರು ಮಾಡಬೇಕು. ಇಂತಹ ಸಾಧನೆ ಮಾಡಿದ ಮಕ್ಕಳು ಪಠ್ಯದಲ್ಲೂ ,ತಮ್ಮ ಹವ್ಯಾಸಗಳನ್ನೂ ಸರಿದೂಗಿಸಿ ಬೆಳೆಯುವುದನ್ನು ನೋಡಿದರೆ ಅವರ ಒತ್ತಡ ಮುಕ್ತ ಬಾಲ್ಯ ಜೀವನ ಬಹಳ ಅದ್ಭುತವಾಗಿದೆ ಎಂದರು.

ತಾಲೂಕ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲ್ ರಾವ್ ಮಾತನಾಡಿ ಇಂದಿನ ಕಂಪ್ಯೂಟರ್ ಯುಗದಲ್ಲಿ ವೇಗವಾದ ಮತ್ತು ಒತ್ತಡವಾದ ಬದುಕಿನಿಂದ ಮಕ್ಕಳು ಸದಾ ಒತ್ತಡದಿಂದ ಇರುವುದನ್ನು ಸರಿಪಡಿಸಲು ಕ್ರೀಡೆ, ಸಂಗೀತ, ಕಲೆ, ಧಾರ್ಮಿಕ ಮುಂತಾದ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ರಾಮಾಯಣ,ಮಹಾಭಾರತ, ಭಾಗವತ ಮುಂತಾದ ಪುರಾಣ ಪುಣ್ಯ ಕಥೆಗಳನ್ನು ಹೇಳಿಕೊಡುವುದರಿಂದ ಹಿರಿಯರಲ್ಲಿ ಭಕ್ತಿ ಭಾವನೆ ಮೂಡುತ್ತದೆ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಸಂಘಟನಾ ಕಾರ್ಯದರ್ಶಿ ನಂ.ಶ್ರೀಕಂಠಕುಮಾರ್ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಮಕ್ಕಳಿಗೆ ಹುಮ್ಮಸ್ಸು,ಉತ್ಸಾಹ ಬಂದು ಅವರ ಸಾಧನೆಗೆ ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಇಳ್ಯೈ ಆಳ್ವಾರ್ ಸ್ವಾಮೀಜಿ ದಿವ್ಯಸಾನಿದ್ಯ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಹಾನಗರ  ಪಾಲಿಕೆ ಸದಸ್ಯರಾದ ಮಾವಿ.ರಾಮಪ್ರಸಾದ್ , ಅಪೂರ್ವ ಸುರೇಶ್, ವಿಪ್ರ ಸಹಾಯವಾಣಿಯ ಜಯಸಿಂಹ ಶ್ರೀಧರ್,

ಯುವ ಬ್ರಾಹ್ಮಣ ವೇದಿಕೆ ಅಧ್ಯಕ್ಷರಾದ ಶ್ರೀಧರಮೂರ್ತಿ, ಎಂ.ಡಿ.ಪಾರ್ಥಸಾರಥಿ, ಅಜಯ್ ರಾವ್,ಹೆಚ್.ವಿ ಭಾಸ್ಕರ್,ಮುಳ್ಳೂರು ಸುರೇಶ್,ರಂಗನಾಥ್, ಚಾಮುಂಡಿಪುರಂ ಮುರಳಿ, ಚಕ್ರಪಾಣಿ, ಅಜಯ್ ಶಾಸ್ತ್ರಿ, ನಿಶಾಂತ್,ವಿನಯ್ ಕಣಗಾಲ್,ಸುಕೃತ್,ಅಜಯ್ ವರ್ಣೇಕರ್ ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: