ಪ್ರಮುಖ ಸುದ್ದಿಮೈಸೂರು

ಮೈತ್ರಿ ಸರ್ಕಾರದಲ್ಲಿ ಯಾವುದೇ ರೀತಿಯ ಹೊಗೆಯಾಡುತ್ತಿಲ್ಲ : ಸತೀಶ್ ಜಾರಕಿ ಹೊಳಿ

ಮೈಸೂರು,ನ.24:- ನಮ್ಮ ಮೈತ್ರಿ ಸರ್ಕಾರದಲ್ಲಿ  ಯಾವುದೇ ರೀತಿಯ ಹೊಗೆಯಾಡುತ್ತಿಲ್ಲ. ಸ್ವಲ್ಪ ಸಮಯಾವಕಾಶದ ಅವಶ್ಯಕತೆ ಇದೆ. ಎರಡು ಪಕ್ಷ ಹೊಂದಾಣಿಕೆಗೆ ಇನ್ನೂ ಕಾಲಾವಕಾಶ ಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿ ಹೊಳಿ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವುದೇ ತೊಂದರೆ ಇಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಮೈತ್ರಿ ಸರ್ಕಾರದಲ್ಲಿ ನೂರೆರಡು ಸಮಸ್ಯೆ ಇದೆ. ಹಾಗಾಗಿ ಮೈತ್ರಿ  ಟೇಕಾಫ್ ಆಗೋಕೆ ಸಮಯ ಬೇಕಾಗಿದೆ. ಈಗಾಗಲೇ ರೈತರ ಸಾಲ ಮನ್ನಾ ಮಾಡಲಾಗಿದೆ. ಅದಕ್ಕೆ ಹಣ ಹೊಂದಿಸಬೇಕಾಗಿದೆ. ಆರು ತಿಂಗಳು ಸಮಯ ಬೇಕಾಗುತ್ತೆ. ಈ ರೀತಿಯಲ್ಲಿ ಟೇಕಾಫ್ ಆಗೋಕೆ ಟೈಮ್ ಬೇಕು ಅಂತ ನಾನು ಹೇಳಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೋಳಿ ಸರ್ಕಾರದಲ್ಲೇ ಇದ್ದಾರೆ. ಸರ್ಕಾರದ ಪರವಾಗಿಯೇ ಇದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಕೆ ಎಂದು ಪ್ರಶ್ನಿಸಿದರು.

ಜಾರಕಿ ಹೊಳಿ ಒಂದು ಜಿಲ್ಲೆಯಲ್ಲೇ ಹೆಚ್ಚು ಕೆಲಸ ಮಾಡುತ್ತಾರೆ. ಹಾಗಾಗಿ ಹೆಚ್ಚು ಪ್ರಚಲಿತದಲ್ಲಿ ಇಲ್ಲ ಅಷ್ಟೇ. ಡಿಕೆಶಿವಕುಮಾರ್ ಬೆಳಗಾವಿ ವಿಚಾರದಲ್ಲಿ ತಲೆ ಹಾಕಿಲ್ಲ. ಅವರು ಸಚಿವರು ರಾಜ್ಯದ ಯಾವುದೇ ಭಾಗಕ್ಕೂ ಬೇಕಾದರೂ ಹೋಗಬಹುದು. ಅದೇ ರೀತಿಯಲ್ಲಿ ಬೆಳಗಾವಿಗೆ ಬಂದಿದ್ದರು. ಈ ವೇಳೆ ಸಹಜವಾಗಿಯೇ ಧರಣಿ ಕೂತರು. ನಾವು ಸಹ ಮೈಸೂರಿಗೆ ಬಂದ ಸಮಯದಲ್ಲಿ ಇದನ್ನು ರಾಜಕೀಯವಾಗಿ ಕಲ್ಪಿಸುವ ಅವಶ್ಯಕತೆ ಇಲ್ಲ. ರೈತರು ತಮ್ಮ ಮನವಿಯನ್ನು ಸಲ್ಲಿಸಲು ಡಿಕೆಶಿವಕುಮಾರ್  ಎದುರು ಪ್ರತಿಭಟನೆ ಮಾಡಿದ್ದಾರೆ. ಅವರು ಸಹ ರಾಜಕೀಯ ನಾಯಕರಾಗಿ ರೈತರನ್ನು ಭೇಟಿ ಮಾಡಿದ್ದಾರೆ ಅಷ್ಟೇ ಎಂದರು.

ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನ ನಂತರ ನಡೆಯಲಿದೆ. ಸಂಪುಟ ವಿಸ್ತರಣೆ ಬಗ್ಗೆ ನಮ್ಮ ಕೆಲವು ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಇದೆ. ಯಾರಾದ್ರೂ ಆಗಲಿ ಬೇಕು ಅನ್ನೋ ಆಸೆ ಅವರಿಗೆ ಇದೆ ಅಷ್ಟೇ. ನಾವು ಕೂಡ ಹಿರಿಯ ನಾಯಕರಿಗೆ ಹೇಳಿದ್ದೇವೆ. ಬೆಳಗಾವಿ ಅಧಿವೇಶನ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: