ಮೈಸೂರು

ಔಷಧ ವಿಜ್ಞಾನ ಕಲಿಕೆಯನ್ನು ಬಲಪಡಿಸುವ ಸಲುವಾಗಿ ಭಾರತೀಯ ಔಷಧ ವಿಜ್ಞಾನ ಕಾಲೇಜುಗಳ ಸಂಘ ಸ್ಥಾಪನೆ : ಉಪಕುಲಪತಿ ಡಾ. ಬಿ. ಸುರೇಶ್

ಮೈಸೂರು,ನ.24:- ಜೆಎಸ್‍ಎಸ್ ಫಾರ್ಮಸಿ ಕಾಲೇಜು, ಮೈಸೂರು (ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ) ಇವರು ಭಾರತೀಯ ಔಷಧ ವಿಜ್ಞಾನ ಕಾಲೇಜುಗಳ ಸಂಘ, ಚೆನ್ನೈ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ  ನ.26 ರವರೆಗೆ ಮೂರು ದಿನಗಳ “ಹೊಸ ಸಾಂಕ್ರಾಮಿಕ ರೋಗಗಳು” ಹರಡುವ ಬಗ್ಗೆ “ಸುಧಾರಿತ ಕಲಿಕೆ ಸರಣಿ” ಬಗ್ಗೆ ವಿಚಾರಗೋಷ್ಠಿಯನ್ನು ಏರ್ಪಡಿಸಿದ್ದು, ಇಂದು ಚಾಲನೆ ನೀಡಲಾಯಿತು.

ಈ ವಿಚಾರ ಸಂಕಿರಣವನ್ನು  ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಉಪಕುಲಪತಿ ಡಾ. ಬಿ. ಸುರೇಶ್ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು ಡಾಕ್ಟರ್ ಆಫ್ ಫಾರ್ಮಸಿ ಪದವಿಯನ್ನು ಭಾರತದಲ್ಲಿ 2008ರಲ್ಲಿ, ಹೊಸ ತಲೆಮಾರಿನ ಔಷಧಕಾರರನ್ನು ಅಭಿವೃದ್ಧಿಪಡಿಸುವ ಸಲುವಾಗಿ ಫಾರ್ಮಸಿ ಕೌನ್ಸಿಲ್ ಆರ್ಫ ಇಂಡಿಯಾ ಅವರು ರೋಗಿಗಳ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಸ್ಥಾಪಿಸಿದರೆಂದು ತಿಳಿಸಿದರು.

ಭಾರತೀಯ ಔಷಧ ವಿಜ್ಞಾನ ಕಾಲೇಜುಗಳ ಸಂಘ, ಚೆನ್ನೈ ಮತ್ತು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ. ಚಿನ್ನಸ್ವಾಮಿಯವರು ಮಾತನಾಡಿ ಭಾರತೀಯ ಔಷಧ ವಿಜ್ಞಾನ ಕಾಲೇಜುಗಳ ಸಂಘವನ್ನು ಔಷಧ ವಿಜ್ಞಾನ ಕಲಿಕೆಯನ್ನು ಬಲಪಡಿಸುವ ಸಲುವಾಗಿ ಸ್ಥಾಪಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಪ್ರೊ. ಕೃಷ್ಣಕುಮಾರ್, ಹೊವಾರ್ಡ್ ವಿಶ್ವವಿದ್ಯಾನಿಲಯ, ಅಮೆರಿಕ, ಡಾ. ಮಿರಂಡ ನೆಲ್ಸನ್, ಅಮೆರಿಕ ಮತ್ತು ಪ್ರೊಡಿಲಿಯಾಸ್ ಬಿ. ಚಾಹಿನ್, ಅಮೆರಿಕ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಜೆಎಸ್‍ಎಸ್ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ. ಟಿ.ಎಂ. ಪ್ರಮೋದ್ ಕುಮಾರ್ ಇವರು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ ಪ್ರತಿನಿಧಿಗಳನ್ನು ಮತ್ತು ಎಲ್ಲಾ ಇತರೆ ಅಧಿಕಾರಿವರ್ಗದವರನ್ನು ಸ್ವಾಗತಿಸಿದರು.  .

ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಮೇಲ್ಪಟ್ಟು ಫಾರ್ಮ್ ಡಿ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳು 25ಕ್ಕೂ ಮೇಲ್ಪಟ್ಟು ಔಷಧ ವಿಜ್ಞಾನ ಕಾಲೇಜುಗಳಿಂದ ಭಾಗವಹಿಸಿದ್ದರು. (ಎಸ್.ಎಚ್)

 

Leave a Reply

comments

Related Articles

error: