ಕ್ರೀಡೆ

ವಿಶ್ವ ಮಹಿಳಾ ಬಾಕ್ಸಿಂಗ್: ದಾಖಲೆಯ 6ನೇ ಚಿನ್ನದ ಪದಕ ಗೆದ್ದ ಮೇರಿ ಕೋಮ್

ನವದೆಹಲಿ,ನ.24-ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಐಬಾ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ದಾಖಲೆಯ ಆರನೇಯ ಬಾರಿಗೆ ಚಿನ್ನದ ಪದಕ ಜಯಿಸಿದ್ದಾರೆ.

ಈ ಮೂಲಕ ಆರು ಬಾರಿ ವಿಶ್ವ ಚಾಂಪಿಯನ್ ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

48ಕೆಜಿ ಲೈಟ್ಫ್ಲೈವೇಟ್ವಿಭಾಗದಲ್ಲಿ ಶನಿವಾರ ನಡೆದ ಫೈನಲ್ಹಣಾಹಣಿಯಲ್ಲಿ ಉಕ್ರೇನ್ ಎಚ್. ಓಕೋಟೊ ಅವರನ್ನು 5-0 ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.

ಕಳೆದ ಮಂಗಳವಾರ ಸೆಮಿಫೈನಲ್ಪ್ರವೇಶಿಸುವ ಮೂಲಕ ತಮ್ಮ 6ನೇ ಪದಕ ಖಾತ್ರಿಪಡಿಸಿದ್ದ ಮೇರಿ ಕೋಮ್‌, ಮಹಿಳಾ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅತ್ಯಧಿಕ ಪದಕ ಗೆದ್ದ ದಾಖಲೆ ಸೃಷ್ಟಿಸಿದ್ದರು. ಚಾಂಪಿಯನ್ಷಿಪ್ಆರಂಭಕ್ಕೂ ಮುನ್ನ ಐದು ಸ್ವರ್ಣ ಮತ್ತು ಒಂದು ಬೆಳ್ಳಿ ಪದಕ ಜಯಿಸಿದ್ದ ಭಾರತೀಯ ಬಾಕ್ಸರ್‌, ಐರ್ಲೆಂಡ್ ದಿಗ್ಗಜೆ ಕೇಟಿ ಟೇಲರ್‌(ಐದು ಚಿನ್ನ, ಒಂದು ಕಂಚು) ಅವರೊಂದಿಗೆ ಜಂಟಿ ಸ್ಥಾನ ಗಳಿಸಿದ್ದರು. ಮೋರಿ ಕೋಮ್‌ 2010ರಲ್ಲಿ ಕೊನೆಯದಾಗಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಬಂಗಾರ ಗೆದ್ದಿದ್ದರು. (ಎಂ.ಎನ್)

 

Leave a Reply

comments

Related Articles

error: