ಸುದ್ದಿ ಸಂಕ್ಷಿಪ್ತ
ರಾಜ್ಯೋತ್ಸವ : ಭಾವಸಂಗಮ -ದತ್ತಿ ಕಾರ್ಯಕ್ರಮ ನಾಳೆ
ಮೈಸೂರು,ನ.24 : ತರಳಬಾಳು ಸಮಾಗಮದಿಂದ ರಾಜ್ಯೋತ್ಸವ ಪ್ರಯುಕ್ತ ‘ಭಾವಸಂಗಮ ಮತ್ತು ದತ್ತಿ ಕಾರ್ಯಕ್ರಮ. ಅನ್ನು ನ.25ರ ಸಂಜೆ 6.30ಕ್ಕೆ ತರಳಬಾಳು ವಿದ್ಯಾರ್ಥಿನಿಲಯ ಆವರಣದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ರಾಜ್ಯೋತ್ಸವ ಕುರಿತು ಉಪನ್ಯಾಸ ನೀಡುವರು, ತರಳಬಾಳು ಸಮಾಗಮ ಅಧ್ಯಕ್ಷ ಎನ್.ಓಂಕಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸುಗಂಧಮ್ಮ ಜಯಪ್ಪ ಹಾಗೂ ಸಂಗಡಿಗರಿಂದ ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. (ಕೆ.ಎಂ.ಆರ್)