ಸುದ್ದಿ ಸಂಕ್ಷಿಪ್ತ

ಪ್ರತಿಭಾ ಪುರಸ್ಕಾರ – ಪ್ರಶಸ್ತಿ ಪ್ರದಾನ ಸಮಾರಂಭ .26.

ಮೈಸೂರು,ನ.24 : ಶ್ರೀರಾಂಪುರದ ಆದರ್ಶ ಸೇವಾ ಸಂಘದಿಂದ ನ.26ರ ಮಧ್ಯಾಹ್ನ 3 ಗಂಟೆಗೆ ಎನ್.ಐ.ಇ. ಡೈಮಂಡ್ ಜುಬಿಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ.

ಶೃಂಗೇರಿ ಶಾರದಾ ಪೀಠ ಆಡಳಿತಾಧಿಕಾರಿ ಡಾ.ವಿ.ಅರ್.ಗೌರಿಶಂಕರ್ ಉದ್ಘಾಟಿಸಲಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಹಾಗೂ ಶಾಸಕ ಎಸ್.ಎ.ರಾಮದಾಸ್ ಮುಖ್ಯ ಅತಿಥಿಗಳಾಗಿ ಬಾಗಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: