ಮೈಸೂರು

ಪ್ರವಾಸಿಗರಿಗೆ ಮೃಗಾಲಯ ಪ್ರವೇಶಕ್ಕೆ ಅವಕಾಶವಿಲ್ಲ :ಬಿ. ರಮಾನಾಥ ರೈ ಸ್ಪಷ್ಟನೆ

ಮೈಸೂರು ಮೃಗಾಲಯದಲ್ಲಿ ಕಾಣಿಸಿಕೊಂಡಿರುವ ಮಾರಕ ರೋಗದ ನಿಯಂತ್ರಣಕ್ಕಾಗಿ ಒಂದು ತಿಂಗಳಕಾಲ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡದಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ್ ರೈ ತಿಳಿಸಿದರು.

ಮೈಸೂರಿನ ಮೃಗಾಲಯದಲ್ಲಿ ಪಕ್ಷಿಗಳಿಗೆ ಪತ್ತೆಯಾದ ಮಾರಕ ರೋಗದ ಸಂಪೂರ್ಣ ವಿವರ ಪಡೆಯಲು ಆಗಮಿಸಿದ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಸಂಪೂರ್ಣ ವಿವರ ಪಡೆದ ಬಳಿಕ ಈ ವಿಷಯ ಸ್ಪಷ್ಟಪಡಿಸಿದರು. ಮೃಗಾಲಯದ ಪ್ರಾಣಿ, ಪಕ್ಷಿ ಹಾಗೂ ಪ್ರವಾಸಿಗರ ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ. ತುರ್ತು ಸಂದರ್ಭದಲ್ಲಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮೃಗಾಲಯದಲ್ಲಿ ಸತ್ತಿರುವ ಪಕ್ಷಿಗಳ ಮಾದರಿಯನ್ನು ಪ್ರಯೋಗಾಲಯಗಳಿಗೆ ರವಾನೆ ಮಾಡಲಾಗಿದೆ. ನಕಾರಾತ್ಮಕ ವರದಿ ಬಂದರೆ ಮಾತ್ರ ಮೃಗಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಇಲ್ಲವಾದರೆ ಮೃಗಾಲಯ ಪ್ರವೇಶಕ್ಕೆ ನಿರಾಕರಿಸಲಾಗುವುದು ಎಂದು ತಿಳಿಸಿದರು.
ಇದೇವೇಳೆ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕಮಳ ಕರಿಕಾಳನ್, ವೈದ್ಯ ಸುರೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: