ಮೈಸೂರು

ಹಾಸನದಲ್ಲಿ ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಖಂಡನೆ

hasana-web-2ಹಾಸನದ ಹಿಮ್ಸ್’ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಿಮ್ಸ್’ನಲ್ಲಿ ಅಳವಡಿಸಲಾದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಹಲ್ಲೆಯಾಗಿರುವ ದೃಶ್ಯ ಸೆರೆಯಾಗಿದೆ. ರೋಗಿಗಳ ಕಡೆಯವರು ಡಿ.31ರಂದು ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಟ್ರೆಚರ್ ನೀಡಲಿಲ್ಲವೆಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ರೋಗಿ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿದ್ದರು. ಆ ಕೋಪವನ್ನು ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವ ಮೂಲಕ ತೀರಿಸಿಕೊಳ್ಳಲಾಗಿದೆ. ವೈದ್ಯ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆ ವೈದ್ಯರ ತಂಡ ಖಂಡಿಸಿದೆ. ಸುಮಾರು 4೦೦ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸಿ ಘಟನೆಯನ್ನು ಖಂಡಿಸಿದ್ದಾರೆ. ಕಪ್ಪು ಪಟ್ಟಿಯನ್ನು ಧರಿಸಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ‘ಸಿಟಿಟುಡೆ’ಗೆ ಮಾಹಿತಿ ನೀಡಿದ ವೈದ್ಯ ವಿದ್ಯಾರ್ಥಿಗಳ ಮುಖಂಡ ಅನುದೀಪ್, ಈ ಘಟನೆಯನ್ನು ರಾಜ್ಯವ್ಯಾಪಿ ಖಂಡಿಸಲು ಹೇಳಲಾಗುವುದು. ಬುಧವಾರ 4೦೦ಕ್ಕೂ ಹೆಚ್ಚು ವೈದ್ಯರು ಖಂಡಿಸಿದ್ದೇವೆ. ಇದುವರೆಗೂ ತಪ್ಪಿತಸ್ಥರ ವಿರುದ್ಧ ಯಾರೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

Leave a Reply

comments

Related Articles

error: