ಮೈಸೂರು

ತ್ಯಾಜ್ಯ ವಿಲೇವಾರಿ, ನಿರ್ವಹಣೆ ಮಾಡದಿದ್ದಲ್ಲಿ ದಂಡ

ಮೈಸೂರು. ನ.26:- ನಂಜನಗೂಡು ನಗರಸಭಾ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ, ನಿರ್ವಹಣೆ ಮಾಡಲು ಸಾರ್ವಜನಿಕರು ಸಹಕರಿಸದಿದ್ದರೆ ಅವರ ವರ್ತನೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೌನ್ಸಿಲ್ ಅನುಮೋದನೆಯ ನಿರ್ಣಯದಂತೆ ಉಲ್ಲಂಘನೆ ಮಾಡಿದವರಿಗೆ ದಂಡ  ವಿಧಿಸಲಾಗುತ್ತದೆ.
ಗಾಡಿ/ಹೋಟೆಲ್/ಬೇಕರಿ/ಮಾಂಸ ಮಾರಾಟ/ಬಾರ್ & ರೆಸ್ಟೋರೆಂಟ್ ಮಾಲೀಕರುಗಳು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಎಲ್ಲೆಂದರಲ್ಲಿ ಘನತ್ಯಾಜ್ಯವನ್ನು ಎಸೆಯಬಾರದು. ಘನತ್ಯಾಜ್ಯ ವಸ್ತು ನಿಯಮಗಳು 2016 ರ ಪ್ರಕಾರ ಕಡ್ಡಾಯವಾಗಿ ಹಸಿ ಕಸ ಒಣ ಕಸವನ್ನಾಗಿ ಮೂಲದಿಂದಲೇ ಬೇರ್ಪಡಿಸಿ ಮನೆ ಮನೆ ಕಸ ಸಂಗ್ರಹಣೆ ಮಾಡುವ ಆಟೋ ಟಿಪ್ಪರ್ ವಾಹನಗಳಿಗೆ ನೀಡಬೇಕು. ಬಯಲು ಮೂತ್ರ/ಶೌಚವನ್ನು ಮಾಡಬಾರದು. ಕಟ್ಟಡದ ಭಗ್ನ ಅವಶೇಷಗಳನ್ನು ರಸ್ತೆ/ಕನ್ಸರ್ ವೆನ್ಸಿಗಲ್ಲಿ/ಬೈ ಪಾಸ್ ರಸ್ತೆ/ಇತರೆ ಸ್ಥಳಗಳಲ್ಲಿ ಹಾಕಬಾರದು.
ಸಾರ್ವಜನಿಕ ವಸತಿ ಸಂಕೀರ್ಣಗಳವರು ಕಸ ಬಿಸಾಡಿದರೆ ರೂ. 50/-, ಇತರೆ ಅಂಗಡಿ ಮಾಲೀಕರು ರಸ್ತೆಗೆ ಕಸ ಬಿಸಾಡಿದರೆ ರೂ. 200/-, ಬಾರ್/ರಸ್ಟೋರೆಂಟ್/ಕಲ್ಯಾಣ ಮಂಟಪ/ ಬೇಕರಿ ಮತ್ತು ಹೋಟೆಲ್ ಗಳಿಂದ ಕಸ ಬಿಸಾಡಿದರೆ ರೂ. 300/-, ಕಟ್ಟಡ ನಿರ್ಮಾಣ/ಭಗ್ನ ಅವಶೇಷ ತ್ಯಾಜ್ಯವನ್ನು ಸರ್ಕಾರಿ/ಸಾರ್ವಜನಿಕ ಜಾಗದಲ್ಲಿ ಹಾಕಿದರೆ ರೂ. 500/-,ಮಾಂಸ ಮಾರಾಟ ಅಂಗಡಿಗಳ ಮುಂದೆ ಪ್ರಾಣಿಗಳ ಕಸವನ್ನು ಬಿಸಾಡಿದರೆ ರೂ. 500/-, ವಸತಿ ಸಂಕೀರ್ಣಗಳಲ್ಲಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಮಾಡದಿದ್ದರೆ ರೂ. 100/- ಹಾಗೂ ಬಯಲು ಮೂತ್ರ ವಿಸರ್ಜನೆ/ಬಯಲು ಶೌಚ ಮಾಡಿದರೆ/ಉಗುಳುವುದು ರೂ. 100/- ದಂಡ ವಿಧಿಸಲಾಗುವುದು.
ಉಲ್ಲಂಘನೆಗಳು 3 ಬಾರಿಗಿಂತ ಹೆಚ್ಚು ಮರುಕಳಿಸಿದರೆ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗುವುದು ಎಂದು ನಗರ ಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: