ಮೈಸೂರು

ಸಮನ್ವಯತೆಯಿಂದ ಬಾಳುವುದನ್ನು ಕಲಿಯಿರಿ : ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಬೇಧ-ಭಾವವನ್ನು ತೊಡೆದು ಸಮನ್ವಯತೆಯಿಂದ ಬಾಳುವುದನ್ನು ಕಲಿಯಿರಿ ಎಂದು ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮೈಸೂರಿನ ನಂಜನಗೂಡು ರಸ್ತೆಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಿಮ್ಮಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಛಲವಿದೆ. ಯಾರ ಮನಸ್ಸನ್ನಾದರೂ ಗೆಲ್ಲಬೇಕೆಂಬ ಆಶಯವಿದ್ದರೆ ನಿಮ್ಮಲ್ಲಿ ದಯೆಯಿರಬೇಕು. ಭ್ರಾತೃತ್ವದ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಬಿಷಪ್ ಥಾಮಸ್ ಆಂಥೋಣಿ ವಾಳಪಿಳ್ಳೆ ಮಾತನಾಡಿ, ಮಾನವೀಯ ಮೌಲ್ಯವನ್ನು ಬೆಳೆಸಿಕೊಂಡು ಸಮಾನತೆಯಿಂದ ಬಾಳಿ ಎಂದರು.

ವಿಲ್’ಶಲ್ ಒವರ್’ಕಮ್ ಎಂಬ ಸ್ಕೌಟ್ಸ್ ಮತ್ತು ಗೈಡ್ಸ್ ಗೀತೆಯನ್ನು ಹಾಡುವ ಮೂಲಕ ಸರ್ವಧರ್ಮ ಪ್ರಾರ್ಥನೆಯನ್ನು ಅಂತ್ಯಗೊಳಿಸಲಾಯಿತು. ಸಮಾರಂಭದಲ್ಲಿ ಸರ್ವಧರ್ಮಗಳ ಗೀತೆಗಳು ಮೊಳಗಿದವು. ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ರಾಜ್ಯಗಳ ಸಂಸ್ಕೃತಿಯನ್ನು ಪ್ರದರ್ಶಿಸಿದರು.

ಏಳುದಿನಗಳ ಕಾಲ ನಡೆದ 17ನೇ ರಾಷ್ಟ್ರೀಯ ಜಂಬೂರಿ ಉತ್ಸವಕ್ಕೆ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವರ್ಣರಂಜಿತ ತೆರೆ ಬಿದ್ದಿತು.

Leave a Reply

comments

Related Articles

error: