ಮೈಸೂರು

ಕರುವಿನ ಮೇಲೆ ಚಿರತೆ ದಾಳಿ

ಮೈಸೂರು,ನ.26:- ಕರುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಕರು ಪ್ರಾಣಬಿಟ್ಟ ಘಟನೆ ಹುಣಸೂರಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಹುಣಸೂರಿನ ಹರವೆ ಕಲ್ಲಳ್ಳಿ ಗ್ರಾಮದ ಸಣ್ಣೇಗೌಡ ಎಂಬವರಿಗೆ ಸೇರಿದ ಕರುವಿನ ಮೇಲೆ ಚಿರತೆ ಇಂದು ಬೆಳಗಿನ ಜಾವ ನಾಲ್ಕರ ಸುಮಾರಿಗೆ ದಾಳಿ ನಡೆಸಿದೆ. ಮತ್ತೆ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಯಾವಾಗ ತಮ್ಮ ಮೇಲೆ ತಮ್ಮ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸುವುದೋ ಎನ್ನುವ ಆತಂಕದಲ್ಲಿದ್ದಾರೆ ಗ್ರಾಮದ ಜನತೆ. ಈ ಕುರಿತು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಶೀಘ್ರದಲ್ಲಿ ಚಿರತೆಯ ಸೆರೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: