ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ಜಲಮಂಡಲಿ: ನವೆಂಬರ್ 27 ರಂದು ವಿವಿಧೆಡೆ ನೀರಿನ ಅದಾಲತ್

ಬೆಂಗಳೂರು (ನ.26): ಬೆಂಗಳೂರು ಜಲಮಂಡಲಿಯ ಸಕಾನಿಅ(ವಾಯುವ್ಯ-2), ಸಕಾನಿಅ(ಪಶ್ಚಿಮ-4) ಮತ್ತು ಸಕಾನಿಅ(ನೈರುತ್ಯ-4) ಉಪವಿಭಾಗಗಳಲ್ಲಿ ಮಂಗಳವಾರ ದಿನಾಂಕ: 27.11.2018 ರಂದು ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್‍ಅನ್ನು ಬೆಳಿಗ್ಗೆ 9.30 ರಿಂದ 11:00 ಗಂಟೆಯವರೆಗೆ ನಡೆಸಲಾಗುತ್ತದೆ.

ದಿನಾಂಕ: 27.11.2018 ರಂದು ಸಕಾನಿಅ(ವಾಯುವ್ಯ-2) ಉಪವಿಭಾಗ ವ್ಯಾಪ್ತಿಗೆ ಬರುವ ಕಾಮಾಕ್ಷಿಪಾಳ್ಯ, ಕಮಲಾನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ-1&2, ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಮೋದಿ ಆಸ್ಪತ್ರೆ ಹಿಂಭಾಗ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ವಾಯುವ್ಯ-2) ಉಪವಿಭಾಗ ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯ ನಿರ್ವಾಹಕ ಅಭಿಯಂತರರು (ವಾಯುವ್ಯ-1): 23491123, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಾಯುವ್ಯ-2) ಉಪವಿಭಾಗ: 22945184.
ಸಕಾನಿಅ(ಪಶ್ಚಿಮ-4) ಉಪವಿಭಾಗ ವ್ಯಾಪ್ತಿಗೆ ಬರುವ ಚಂದ್ರಲೇಔಟ್-1, ವಿಜಯನಗರ, ಓ.ಹೆಚ್.ಟಿ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಅರ್ಕಾವತಿ ಭವನ, ನೆಲಮಹಡಿ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆರ್.ಪಿ.ಸಿ ಲೇಔಟ್ ರಸ್ತೆ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಶ್ಚಿಮ-4) ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

ಕಾರ್ಯನಿರ್ವಾಹಕ ಅಭಿಯಂತರರು (ಪಶ್ಚಿಮ): 22945171, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಶ್ಚಿಮ-4) ಉಪವಿಭಾಗ: 23350020.

ಸಕಾನಿಅ(ನೈರುತ್ಯ-4) ಉಪವಿಭಾಗ ವ್ಯಾಪ್ತಿಗೆ ಬರುವ ಜೆ.ಪಿ.ನಗರ-1, ಜಯನಗರ 4ನೇ ‘ಟಿ’ ಬ್ಲಾಕ್, 4ನೇ ಬ್ಲಾಕ್, ಹೊಂಬೇಗೌಡನಗರ, ಭೈರಸಂದ್ರ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಕಪಿಲ ಭವನ, 1ನೇ ಮುಖ್ಯ ರಸ್ತೆ, 36ನೇ ಅಡ್ಡ ರಸ್ತೆ, ಹೆಡ್ ಪೋಸ್ಟ್ ಆಫೀಸ್ ಹತ್ತಿರ, 4ನೇ ‘ಟಿ’ ಬ್ಲಾಕ್, ಜಯನಗರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ-4) ಉಪವಿಭಾಗ ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯ ನಿರ್ವಾಹಕ ಅಭಿಯಂತರರು (ಆಗ್ನೇಯ-2); 22945389, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ-4) ಉಪವಿಭಾಗ: 22945148.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ;22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ;8762228888 ಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: