ಪ್ರಮುಖ ಸುದ್ದಿಮೈಸೂರು

ನ.28ರಂದು ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ : ಪಿ.ವಾಸು

ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಂದ ಉದ್ಘಾಟನೆ

ಮೈಸೂರು. ನ.26 : ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವವನ್ನು ನ.28ರಂದು ಬನ್ನೂರು ರಸ್ತೆಯಲ್ಲಿರುವ ಸಂಸ್ಥೆಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ  ಪಿ.ವಾಸು ತಿಳಿಸಿದರು.

ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ 1991ರಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ನಡೆದ ಬಂದ ಹಾದಿಯನ್ನು ವಿವರ ನೀಡಿ. ಸಂಸ್ಥೆಯಲ್ಲಿ ರಾಜ್ಯ ಪಠ್ಯ ಶಿಕ್ಷಣ ಪದ್ಧತಿ ಸೇರಿದಂತೆ  ಸಿಬಿಎಸ್ ಸಿ ಮಾಧ್ಯಮದಲ್ಲಿಯೂ ಪ್ರಾಥಮಿಕ ಪ್ರೌಢಶಿಕ್ಷಣ ಇದ್ದು ಇದರೊಂದಿಗೆ ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಹೋಟೆಲ್ ಮ್ಯಾನೇಜ್ಮೆಂಟ್, ಬಿ.ಇಡಿ. ಕಂಪ್ಯೂಟರ್ ಅಪ್ಲಿಕೇಷನ್‌ಎಂ.ಬಿಎ, ಎಮ್.ಎಸ್.ಡಬ್ಲ್ಯು. ಕಾನೂನು ಪದವಿಯೊಂದಿಗೆ ಎಂ.ಟಿಎ ಇತ್ಯಾದಿ ಪದವಿಗಳವರೆಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹಂತ ಹಂತವಾಗಿ ಸಂಸ್ಥೆ ಬೆಳೆದು ಬಂದಿದ್ದನ್ನು ವಿವರವಾಗಿ ತಿಳಿಸಿದರು.

ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತಿದ್ದು ಹಲವು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸುವುದು, ಇದರೊಟ್ಟಿಗೆ ಸ್ವತಂತ್ರ ಹೋರಾಟಗಾರರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ, ಕಾಲೇಜಿನಿಂದ ಹಲವಾರು ಕ್ರೀಡಾಪಟುಗಳು, ಕಲಾವಿದರು ಹೊರಹೊಮ್ಮಿದ್ದು ಸಂತಸ ತಂದಿದ್ದು.  ಸೇವಾ ಮನೋಭಾವನೆಯಿಂದ ಆರಂಭವಾದ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ  ಉತ್ತಮ ಗುಣಮಟ್ಟದ   ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ ಎಂದು ತಿಳಿಸಿದರು.

ಅಂದು ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಸಭಾಂಗಣ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಇವರೊಂದಿಗೆ ಮೇಯರ್ ಪುಷ್ಪಲತಾ ಜಗನ್ನಾಥ. ಸಂಸದ ಪ್ರತಾಪ್ ಸಿಂಹ, ಶಾಸಜ ತನ್ವೀರ್ ಸೇಠ್, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಇನ್ನಿತರ ಗಣ್ಯರು ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಅಂದು ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯ ವಹಿಸುವರು. ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಸಮಾರೋಪ ಭಾಷಣ ಮಾಡುವರು. ಸಂಸದ ಆರ್.ಧ್ರುವ ನಾರಾಯಣ ಅಧ್ಯಕ್ಷತೆ ವಹಿಸುವರು‌ ಸಚಿವ ಸಾ.ರಾ.ಮಹೇಶ್ಗ, ಶಾಸಕರಾದ ಸಂದೇಶ್ ನಾರಾಜ್ ಆರ್ ಧರ್ಮಸೇನ್ ಮೊದಲಾದವರು ಇರಲಿದ್ದಾರೆ. ಅಂದು ಆರಂಭವಾಗುವ ಕಾರ್ಯಕ್ರಮ ಇಡೀ ವರ್ಷ ಪೂರ್ತಿ ನಡೆಯಲಿದ್ದು ಇದರಂಗವಾಗಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ತಜ್ಞರುಗಳಿಂದ ಶೈಕ್ಷಣಿಕ ಉಪನ್ಯಾಸಗಳನ್ನು ಆಯೋಜಿಸಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿ.ಕವೀಶ್ ಗೌಡ ಮಾತನಾಡಿ 18  ವಿವಿಧ ಪದವಿಗಳಲ್ಲಿ 5000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. 300 ಉಪನ್ಯಾಸಕರ ವರ್ಗವಿದ್ದು. ಸಮಗ್ರಾಭಿವೃದ್ಧಿಯೊಂದಿಗೆ ಸ್ಥಳೀಯ ಅವಕಾಶಗಳನ್ನು ಬಳಸಿಕೊಂಡು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.  ಕಾಲೇಜಿನಿಂದ ಪ್ರತಿ ವರ್ಷ ಸುಮಾರು ಶೇ.70 ರಿಂದ 80ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಾಗುತ್ತಿದ್ದಾರೆ. ಸಂಶೋಧನೆಗೂ ಒತ್ತು ಕೊಟ್ಟಿದ್ದು ಸಮಾಜಕ್ಕಾಗುವ ಉಪಯೋಗ ಪರಿಗಣಿಸಿ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದ್ದು  ಸಾಮಾಜೀಕರಣ ಸಂಬಂಧಿಸಿದಂತೆ ಹಲವು ಪ್ರಯೋಗ ನಡೆಯಿತ್ತಿವೆ ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: