ಮೈಸೂರು

ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯುರ್ವೇದದ ಕುರಿತು ಸರಣಿ ಉಪನ್ಯಾಸ

ಮೈಸೂರು,ನ.26:- 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ವರ್ಷದ ಆಯುರ್ವೇದ ದಿನಾಚರಣೆಯನ್ನು “ಸಾರ್ವಜನಿಕ ಆರೋಗ್ಯದಲ್ಲಿ ಆಯುರ್ವೇದದ ಪಾತ್ರ” ಎಂಬ ಘೋಷವಾಕ್ಯದೊಂದಿಗೆ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ವತಿಯಿಂದ ಮೈಸೂರು ನಗರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯುರ್ವೇದದ ಕುರಿತು ಸರಣಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಾಪಕರು ಮತ್ತು ವೈದ್ಯರು 124 ಸ್ಥಳಗಳಲ್ಲಿ  ಆಯುರ್ವೇದದ ಕುರಿತು ಉಪನ್ಯಾಸ ನೀಡಿ ಸಾರ್ವಜನಿಕರಲ್ಲಿ ಆಯುರ್ವೇದದ ಕುರಿತು ಅರಿವು ಮೂಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅತ್ಯುತ್ಸಾಹದಿಂದ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.

ಮಹಿಳೆಯರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ರಾಜರಾಜೇಶ್ವರಿ ನಗರದಲ್ಲಿರುವ ದೇವಸ್ಥಾನದ ಆವರಣದಲ್ಲಿ ನೆರವೇರಿಸಲಾಯಿತು. ಹಾಗೂ ಹಿರಿಯ ನಾಗರೀಕರಿಗಾಗಿ ಜಯನಗರದ ಛಾಯಾದೇವಿ ವೃದ್ಧಾಶ್ರಮ ಮತ್ತು ಆನಾಥಾಶ್ರಮದಲ್ಲಿ  ಆರೋಗ್ಯದ ಬಗ್ಗೆ ಅರಿವು ನೀಡುವುದರ ಜೊತೆಗೆ ಆರೋಗ್ಯ ತಪಾಸಣಾ ಮಾಡಿ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು. ಮಕ್ಕಳಿಗೆ ಹಣ್ಣು ಮತ್ತು ಸಿಹಿ ವಿತರಿಸಲಾಯಿತು.       (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: