ಮೈಸೂರು

26/11 ಉಗ್ರರ ಅಟ್ಟಹಾಸ ದಿನವನ್ನು ಕರಾಳದಿನ ವಾಗಿ ಆಚರಿಸಿದ ಪ್ರಜ್ಞಾವಂತ ನಾಗರಿಕ ವೇದಿಕೆ

ಮೈಸೂರು,ನ.27:- ಪ್ರಜ್ಞಾವಂತ ನಾಗರಿಕ ವೇದಿಕೆ ಸಂಘಟನೆಯ ಸದಸ್ಯರು ಮತ್ತು ವಿವಿಧ ಸಂಘಟನೆ ಹಾಗೂ ನಾಗರೀಕರು ನಿನ್ನೆ ನಗರದ  ಅಗ್ರಹಾರ ವೃತ್ತದಲ್ಲಿ   ಜಮಾವಣೆಗೊಂಡು ಕಳೆದ 10 ವರ್ಷಗಳ ಹಿಂದೆ  ಮುಂಬೈನಲ್ಲಿ ನಡೆದ ಉಗ್ರರ ಅಟ್ಟಹಾಸ ಕ್ಕೆ ವೀರ ಮರಣ ಹೊಂದಿದ ಭಾರತದ ಪೊಲೀಸ್ ಅಧಿಕಾರಿಗಳ ಭಾವಚಿತ್ರ ಹಿಡಿದು ಮೇಣದ ಬತ್ತಿ ಹಚ್ಚುವ ಮುಖಾಂತರ   ಮೌನವಾಗಿ ಶ್ರದ್ದಾಂಜಲಿ ಅರ್ಪಿಸಿದರು.

ಈ ಸಂದರ್ಭ  ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್   ಮಾತನಾಡಿ ಪಾಕಿಸ್ತಾನ ಮೂಲದ ಉಗ್ರರು  ಭಾರತ ಮಾತೆ ಪುತ್ರರನ್ನು ಹತ್ಯೆ ಮಾಡಿ ಇಂದಿಗೆ 10 ವರ್ಷಗಳಾಗಿದ್ದು ನಮ್ಮೆಲ್ಲರಿಗೂ ಬೇಸರದ ಸಂಗತಿ ಆಗಿದೆ. ಭಾರತದಲ್ಲಿ ಉಗ್ರರು ನುಸುಳಿ ಈ ಮಣ್ಣಿನ ಸಾವಿರಾರು ಮಕ್ಕಳುಗಳನ್ನು ಘೋರವಾದ ಹತ್ಯೆ ಮಾಡಿದ್ದಾರೆ. ದೇಶದ ಗಡಿ,ಭದ್ರತೆಯ ವಿಚಾರ ಬಂದಾಗ ಇಂದಿನ ಯುವ ಪೀಳಿಗೆಯ ಯುವಕರು ರಸ್ತೆಗಿಳಿದು ಖಂಡಿಸಬೇಕು ಹಾಗೂ ವಿಧ್ವಂಸಕ ಕೃತ್ಯಗಳು ,ದೇಶ ದ್ರೋಹ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಸಮಾಜದ ಒಳಿತಿಗಾಗಿ ದೇಶ ಸೇವೆ ಮಾಡಬೇಕು ಎಂದು ಹೇಳಿದರು.

ಮಾಜಿ ನಗರಪಾಲಿಕೆ ಸದಸ್ಯರಾದ  ಎಂ ಡಿ ಪಾರ್ಥಸಾರಥಿ ,ಸಂದೇಶ್, ಶ್ರೀನಿವಾಸ್ ಪ್ರಸಾದ್, ರಂಗನಾಥ್, ಅರುಣ್ , ಚಂದನ್ ,ಲಕ್ಷ್ಮಣ್, ಪೇಪರ್ ಮಂಜು ,ಇತರ ದೇಶಭಕ್ತರು ಶ್ರೀಕಾಂತ್ ಕಶ್ಯಪ್, ಗೋಪಾಲ್,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: