ಮೈಸೂರು

ಶಾರ್ಟ್ ಸರ್ಕಿಟ್ ನಿಂದ ಮನೆಗೆ ಬೆಂಕಿ : ಪೀಠೋಪಕರಣಗಳು ಭಸ್ಮ; ಮಗು ಪಾರು

ಮೈಸೂರು,ನ.27:- ರಾಜೀವ ನಗರದ ಎಲ್ ಐ ಜಿ ಕಾಲೋನಿಯ ಮನೆಯೊಂದರಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡು ಪೀಠೋಪಕರಣಗಳು ಭಸ್ಮವಾದ  ಘಟನೆ ನಿನ್ನೆ ನಡೆದಿದೆ.

ಎಲ್ ಐ ಜಿ ಕಾಲೋನಿಯ ಸಯ್ಯದ್ ಎಂಬವರ ಮನೆಯಲ್ಲಿ ಏಳು ವರ್ಷದ ಮಗುವೊಂದನ್ನೇ ಮನೆಯಲ್ಲಿ ಬಿಟ್ಟು ಮನೆಯವರೆಲ್ಲ ಹೊರ ಹೋದ ಸಂದರ್ಭ ಮನೆಯಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಮಗು ಕಿಟಕಿಯಿಂದ ಸಹಾಯಕ್ಕಾಗಿ ಅಂಗಲಾಚಿದೆ. ಕಿಟಕಿಯಿಂದ ಹೊರಬರುತ್ತಿದ್ದ ದಟ್ಟ ಹೊಗೆಯನ್ನು ಗಮನಿಸಿದ ಸಾರ್ವಜನಿಕರು ಕಿಟಕಿಯನ್ನು ಒಡೆದು ಮಗುವನ್ನು ರಕ್ಷಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬನ್ನಿಮಂಟಪದ ಅಗ್ನಿಶಾಮಕ  ಅಧಿಕಾರಿ ಶಿವಸ್ವಾಮಿ ನೇತೃತ್ವದ ತಂಡ ಬೆಂಕಿಯನ್ನು ಆರಿಸಿದೆ. ಅಷ್ಟೊತ್ತಿಗಾಗಲೇ ಮನೆಯಲ್ಲಿದ್ದ ಪೀಠೋಪಕರಣಗಳೆಲ್ಲ ಸುಟ್ಟು ಭಸ್ಮಗೊಂಡಿದ್ದವು. ಅಗ್ನಿಶಾಂಕ ಸಿಬ್ಬಂದಿ ಸಿದ್ದೇಗೌಡ, ಲಕ್ಷ್ಮಿಕಾಂತ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: