ಕ್ರೀಡೆ

ದಿನವೊಂದರಲ್ಲೇ 10 ವಿಕೆಟ್ ಕಬಳಿಸಿ ಕುಂಬ್ಳೆ ದಾಖಲೆ ಸರಿಗಟ್ಟಿದ ಯಾಸಿರ್ ಶಾ

ದುಬೈ,ನ.27- ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ ಟೆಸ್ಟ್ ಪಂದ್ಯದ ದಿನವೊಂದರಲ್ಲೇ ಹತ್ತು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ.

ಈ ಮೂಲಕ ಅನಿಲ್ ಕುಂಬ್ಳೆ ಹೆಸರಲ್ಲಿದ್ದ 20 ವರ್ಷದಷ್ಟು ಹಳೆಯ ದಾಖಲೆಯನ್ನು ಯಾಸೀರ್ ಶಾ ಸರಿಗಟ್ಟಿದ್ದಾರೆ. ಈ ಹಿಂದೆ 1999ರ ದಿಲ್ಲಿ ಟೆಸ್ಟ್ ಪಂದ್ಯದಲ್ಲಿ ಪಾಕ್ ವಿರುದ್ಧವೇ ಇನ್ನಿಂಗ್ಸ್‌ವೊಂದರ ಎಲ್ಲ 10 ವಿಕೆಟುಗಳನ್ನು ಕಬಳಿಸುವ ಮೂಲಕ ಕುಂಬ್ಳೆ ಇತಿಹಾಸ ರಚಿಸಿದ್ದರು.

ದುಬೈನಲ್ಲಿ ಸಾಗುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಹ್ಯಾರಿಸ್ ಸೊಹೈಲ್ (147) ಹಾಗೂ ಬಾಬರ್ ಅಜಾಮ್ (127*) ಶತಕದ ನರೆವಿನೊಂದಿಗೆ ಐದು ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು.

ಬಳಿಕ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಕಿವೀಸ್ ಯಾಸೀರ್ ಶಾ ದಾಳಿಗೆ ತತ್ತರಿಸಿ ಕೇವಲ 90 ರನ್‌ಗಳಿಗೆ ಸರ್ವಪತನ ಕಂಡಿತ್ತು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದ್ದ ಕಿವೀಸ್ 90 ರನ್ ಪೇರಿಸುವುದರೆಡೆಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು. ಅಂದರೆ ಕೇವಲ 40 ರನ್ ಅಂತರದಲ್ಲಿ ತೆನ್ನಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.

ಮಾರಕ ದಾಳಿ ಸಂಘಟಿಸಿದ ಯಾಸೀರ್ ಶಾ 12.3 ಓವರ್‌ಗಳಲ್ಲಿ 41 ರನ್ ತೆತ್ತು ಎಂಟು ವಿಕೆಟಗಳನ್ನು ಕಬಳಿಸಿದ್ದರು.

ಈ ಮೂಲಕ 328 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡ ಪಾಕ್, ಕಿವೀಸ್‌ ತಂಡವನ್ನು ಫಾಲೋಆನ್‌ಗೆ ಗುರಿಯಾಗಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಿವೀಸ್‌ಗೆ ಕಂಟಕವಾದ ಯಾಸೀರ್ ಎರಡು ಪ್ರಮುಖ ವಿಕೆಟುಗಳನ್ನು ಕಬಳಿಸುವ ಮೂಲಕ ದಿನದಲ್ಲಿ 10 ವಿಕೆಟುಗಳ ಸಾಧನೆ ಮಾಡಿದರು. (ಎಂ.ಎನ್)

 

Leave a Reply

comments

Related Articles

error: