ದೇಶ

ಪತ್ರಕರ್ತ ರಾಧಾಕೃಷ್ಣನ್ ನಾಯರ್ ನಿಧನ

ನವದೆಹಲಿ,ನ.27-ಸಿಎನ್‌ಎನ್‌-ನ್ಯೂಸ್‌18 ಸಂಸ್ಥೆಯ ವ್ಯವಸ್ಥಾಪಕ ಸಂಪಾದಕ ರಾಧಾಕೃಷ್ಣನ್‌ ನಾಯರ್‌ (54) ಮಂಗಳವಾರ ಬೆಳಿಗ್ಗೆ ನಿಧನರಾದರು.

ವಿದ್ಯುನ್ಮಾನ ಮಾಧ್ಯಮಕ್ಕೆ ಬರುವ ಮುನ್ನ ನಾಯರ್‌ ಅವರು ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾದಲ್ಲಿ (ಯುಎನ್‌ಐ) ಕೆಲ ವರ್ಷ ಕೆಲಸ ಮಾಡಿದ್ದರು. ಟಿವಿ18 ನಿರ್ಮಾಣದ ‘ಇಂಡಿಯಾ ಬ್ಯುಸಿನೆಸ್‌ ರಿಪೋರ್ಟ್‌’ ಕಾರ್ಯಕ್ರಮದ ನಿರ್ವಾಹಕರಾಗಿದ್ದರು. ಈ ಕಾರ್ಯಕ್ರಮ ಬಿಬಿಸಿ ಇಂಡಿಯಾದಲ್ಲಿ ಪ್ರಸಾರವಾಗುತ್ತಿತ್ತು.

ಜೊತೆಗೆ ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾನೂನು ವಿಷಯಗಳಿಗೆ ಸಂಬಂಧಿಸಿದ ‘ಭಂವಾರ್’ ಧಾರಾವಾಹಿಯ ಬರವಣಿಗೆ ಮತ್ತು ಸಂಶೋಧನೆಯಲ್ಲಿ ನೆರವಾಗಿದ್ದರು.

ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪತ್ರಕರ್ತರು ಮತ್ತು ರಾಜಕೀಯ ಮುಖಂಡರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: