ಪ್ರಮುಖ ಸುದ್ದಿಮೈಸೂರು

ದುಷ್ಟಸಂಹಾರ ಫೇಸ್ ಬುಕ್ ಅಕೌಂಟಿನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೈಬರ್ ಕ್ರೈಂಗೆ ಬೆಳಕು ಸಂಸ್ಥೆಯಿಂದ ದೂರು

ಮೈಸೂರು,ನ.27 : ಈಚೆಗೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಾವನ್ನು ಸಂಭ್ರಮಿಸಿ, ದಿವಂಗತ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್‍ರವರ ಬಗ್ಗೆ ಪೇಸ್ ಬುಕ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ‘ದುಷ್ಟ ಸಂಹಾರ’ ಫೇಸ್ ಬುಕ್ ಅಕೌಂಟ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ಬೆಳಕು ಸಂಸ್ಥೆಯ ಸಂಸ್ಥಾಪಕರು ಕೆ.ಎಂ. ನಿಶಾಂತ್ ದೂರು ದಾಖಲಿಸಿದ್ದಾರೆ.

ಚಲನಚಿತ್ರ ನಟ, ರಾಜಕಾರಣಿ, ಸಮಾಜ ಸೇವಕ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಅಜಾತ ಶತ್ರು, ಅವರ ಸಾವನ್ನು ಕೆಲವು ವಿಕೃತ ಮನಸ್ಸಿನ ದೇಶದ್ರೋಹಿಗಳು ಸಂಭ್ರಮಿಸುತ್ತಾ ಅದರೊಂದಿಗೆ ಕನ್ನಡದ ಮೇರು ನಟರಾದ ದಿವಂಗತ ಡಾ.ರಾಜ್‍ಕುಮಾರ್ ಹಾಗೂ ದಿವಂಗತ ಡಾ.ವಿಷ್ಣುವರ್ಧನ್‍ರವರ ಬಗ್ಗೆ ಅವಾಚ್ಯಶಬ್ದಗಳಿಂದ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವುದು ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಡಾ.ಅಂಬರೀಶ್‍ರವರ ನಿಧನದ ವಾರ್ತೆ ಕನ್ನಡಿಗರ ಪಾಲಿಗೆ ರ್ದುದೈವ.  ಅವರ ಕುಟುಂಬದವರು, ಅಭಿಮಾನಿಗಳು, ಸಮಸ್ತ ಕನ್ನಡಿಗರು ಈ ನೋವಿನಿಂದ ಹೊರಬರಲಾಗದೇ ಸಂಕಟದ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ “ದುಷ್ಠಸಂಹಾರ” ಎಂಬ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ  ಕನ್ನಡದ ಮೇರು ನಟರಾದ ಡಾ.ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅಂಬರೀಶ್ ಅವರುಗಳ ಭಾವಚಿತ್ರದೊಂದಿಗೆ  ಅವಾಚ್ಯ ಶಬ್ದದಿಂದ ನಿಂದಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದು ದುಷ್ಕರ್ಮಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಬೇಕೆಂಬ ದುರುದ್ದೇಶದಿಂದ ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ಕೋಮು ಸೌಹಾರ್ಧವನ್ನು ಧಕ್ಕೆ ತರುವ  ಕುತಂತ್ರ ಇದರಲ್ಲಿ ಅಡಗಿದೆ. ಇಂತಹ ವಿಧ್ವಂಸಕ ಕೃತ್ಯವಾಗಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಕಾನೂನಾತ್ಮಕವಾಗಿ ಸೂಕ್ತ ಕ್ರಮವನ್ನು ಜರುಗಿಸಿ ಇಂತಹವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು

ಇದೇ ಸಂಧರ್ಭದಲ್ಲಿ ಬೆಳಕು ಸಂಸ್ಥೆಯ ಎಂ.ಎನ್. ಧನುಷ್, ಪ್ರವೀಣ್, ಸುದರ್ಶನ್, ಪ್ರಜ್ವಲ್, ಅಣ್ಣಯ್ಯ, ನಿಕಿಲ್, ಧ್ಯನ್ ಮುಂತಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: