ಮೈಸೂರು

ಬೆಟ್ಟದಪುರದಲ್ಲಿ “ಇಂಗ್ಲಿಷ್ ಫನ್‌ಫೇರ್” ವಿನೂತನ ಕಾರ್ಯಕ್ರಮ

ಬೈಲಕುಪ್ಪೆ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವಶ್ಯಕ ಎಂದು ಅರಕಲಗೂಡು ತಾಲೂಕು ರುದ್ರಪಟ್ಟಣ ಗ್ರಾಮದ ಶ್ರೀ ವಿದ್ಯಾಶಂಕರ ಶಿಕ್ಷಣ ಸಂಸ್ಥೆಯ ಶಿಕ್ಷಕ ಪಿ.ರವಿ ತಿಳಿಸಿದರು.

ತಾಲೂಕಿನ ಬೆಟ್ಟದಪುರ ಡಿ.ತಮ್ಮಯ್ಯ ಸ್ಮಾರಕ ನವೋದಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಇ.ಎಫ್.ಇ. ಸಲ್ಯೂಷನ್ಸ್ ಬೆಂಗಳೂರು – ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ವರ್ಷದ ವಿಶೇಷವಾಗಿ ಇಂಗ್ಲಿಷ್ ಫನ್‌ಫೇರ್ ಎಂಬ ವಿನೂತನ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಕಲಿಸುವುದು ಕೇವಲ ಪಠ್ಯಪುಸ್ತಕದಿಂದ ಸಾಧ್ಯವಿಲ್ಲ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಪರಸ್ಪರ ಇಂಗ್ಲಿಷ್’ನಲ್ಲಿ ಮಾತನಾಡುವ ಮುಖಾಂತರ ಭಾಷಾ ಕೌಶಲ್ಯ ಬೆಳೆಸಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.

ಆವರ್ತಿ ಗ್ರಾಮದ ರಾಜರಾಜೇಶ್ವರಿ ಪ್ರೌಢಶಾಲೆಯ ಶಿಕ್ಷಕ ಸಿ.ಟಿ.ಗುರುದತ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪೋಷಕರಲ್ಲಿ ತಮ್ಮ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಕಲಿತು ಉನ್ನತ ಹುದ್ದೆಗೆ ಹೋಗಬೇಕು ಎಂಬ ಹೆಬ್ಬಯಕೆ ಇರುತ್ತದೆ. ಅದಕ್ಕಾಗಿ ಈ ಶಿಕ್ಷಣ ಸಂಸ್ಥೆ ಪ್ರತಿವರ್ಷ ಇಂತಹ ವಿದ್ಯಾರ್ಥಿಪರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು. ಇದರಿಂದ ಕನ್ನಡ ಭಾಷೆ ಜತೆಗೆ ಇಂಗ್ಲಿಷ್ ಕಲಿಯುವುದಕ್ಕೆ ಸಹಕಾರಿಯಾಗುತ್ತಿದೆ ಎಂದರು.

ಹಲವು ಕಾರ್ಯಕ್ರಮ

ಶಾಲಾ ಮಕ್ಕಳು ವಿಜ್ಞಾನ ವಿಭಾಗದಲ್ಲಿ ಗಾಳಿಯ ಮುಖಾಂತರ ವಿದ್ಯುತ್ ತಯಾರು ಮಾಡುವುದು, ಸಿಗರೇಟ್‌ನಂತಹ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಹಾನಿ ಕುರಿತು ಮಾಹಿತಿ, ಕೌನ್ ಬನೇಗಾ ಕರೋಡ್‌ಪತಿ ಮಾದರಿಯಲ್ಲಿ ರಸಪ್ರಶ್ನೆ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ, ಬ್ಯಾಂಕ್ ವ್ಯವಹಾರದ ಕಿರುನೋಟ, ಸಂಬಂಧಗಳನ್ನು ತಿಳಿಸುವ ಅವಿಭಕ್ತ ಕುಟುಂಬ, ಸ್ವಚ್ಛ ಭಾರತ ಬಿಂಬಿಸುವ ಕಿರುನಾಟಕ ಸೇರಿದಂತೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸಲಾಗುತ್ತಿದೆ.

ಸಂಸ್ಥೆಯ ಆಡಳಿತಾಧಿಕಾರಿ ಜಿ.ಸಿ ನಟರಾಜು, ನಿರ್ದೇಶಕರಾದ ಕೃಷ್ಣಮೂರ್ತಿ, ವಿಜಯ್‌ಕುಮಾರ್, ಮುಖ್ಯ ಶಿಕ್ಷಕರಾದ ಕುಮಾರಿ, ತಿಮ್ಮಯ್ಯ, ಮುರುಳಿ, ಬೆಂಗಳೂರು ಇಎಫ್‌ಇ ಸಲೂಷ್ಯನ್ ಸಾಹಿತ್ ಕಿರಣ್, ಸಹಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.

chandan-gowda-m-r-web
ಚಂದನ್ ಗೌಡ ಎಂ.ಆರ್.

ಅನಿಸಿಕೆ: ಚಂದನ್ ಗೌಡ ಎಂ.ಆರ್, ವಿದ್ಯಾರ್ಥಿ

ನಮ್ಮ ಶಾಲೆಯಲ್ಲಿ ಪಾಠ ಮತ್ತು ಕ್ರೀಡೆಯ ಜೊತೆಗೆ ಪ್ರತಿ ವರ್ಷದಲ್ಲೂ ಚಿತ್ರಕಲೆ, ಯೋಗಾಸನ, ಮೆಡಿಕಲ್ ಕ್ಯಾಂಪ್, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸುತ್ತಾರೆ. ಈ ವರ್ಷ ಫನ್’ಫೇರ್ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಿಂದ ದೇಶದ ರಕ್ಷಣೆ ಬಗ್ಗೆ ಮಾಹಿತಿ, ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ, ಸಾವಯವ ಕೃಷಿ ಬಗ್ಗೆ ಮಾಹಿತಿ, ಗಾಳಿಯಿಂದ ವಿದ್ಯುತ್ ಉತ್ಪಾದನೆ ಬಗ್ಗೆ ಮಾಹಿತಿ ಮುಂತಾದ ಉಪಯುಕ್ತ ಮಾಹಿತಿಗಳನ್ನು ತಿಳಿಸಲಾಗುತ್ತದೆ.

ವರದಿ: ರಾಜೇಶ್

Leave a Reply

comments

Related Articles

error: