ಪ್ರಮುಖ ಸುದ್ದಿ

ಮೂವತ್ತು ಜನರ ಸಾವಿನ ನಂತರವೂ ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ : ಪರವಾನಗಿ ಇಲ್ಲದೇ ಓಡುತ್ತಿದೆ ಸಚಿವರ ಬಸ್

ರಾಜ್ಯ(ಮಂಡ್ಯ)ನ.27:-  ಮುಖ್ಯ ಮಂತ್ರಿಗಳ ಆದೇಶದ ನಂತರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಮೂವತ್ತು ಜನರ ಸಾವಿನ ನಂತರವೂ ಆರ್.ಟಿ.ಓ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಮಾಹಿತಿ ನೀಡಲು ನಾಗಮಂಗಲ ಆರ್.ಟಿ.ಓ ಅಧಿಕಾರಿಗೆ 9480336669 ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ.

ಭೀಕರ ಅಪಘಾತ ನಡೆದು ಮೂವತ್ತು ಮಂದಿ ಸಾವನ್ನಪ್ಪಿದರೂ  ಸಾರಿಗೆ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಚಿವ ಜಮೀರ್ ರಿಂದ ಕಾನೂನು ಉಲ್ಲಂಘನೆ ಆರೋಪ ಕೇಳಿ ಬಂದಿದ್ದು, ಪರವಾನಗಿ ಇಲ್ಲದೆ ಖಾಸಗಿ ಬಸ್ ಸಂಚರಿಸುತ್ತಿದೆ. ಸಚಿವ ಜಮೀರ್ ಮಾಲೀಕತ್ವದ ನ್ಯಾಷನಲ್ ಬಸ್ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದು, ಬಸ್ ನ್ನು ಸಾರ್ವಜನಿಕರು ತಡೆಹಿಡಿದಿದ್ದಾರೆ. ಕೆ.ಆರ್.ಪೇಟೆ ಬೆಂಗಳೂರು ಮಾರ್ಗದಲ್ಲಿ ಬಸ್ ಸಂಚರಿಸುತ್ತಿದ್ದು, ಶನಿವಾರವಷ್ಟೇ ಖಾಸಗಿ ಬಸ್ಸೊಂದು 30ಮಂದಿಯನ್ನು ಬಲಿ ಪಡೆದಿತ್ತು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಘಟನೆ ನಡೆದಿತ್ತು. ಸಾರಿಗೆ ಅಧಿಕಾರಿಗಳು  ಸಿಎಂ ಸೂಚನೆಗೂ ಕ್ಯಾರೆ ಎನ್ನುತ್ತಿಲ್ಲ. ಪರವಾನಗಿ ಇಲ್ಲದ, ಯೋಗ್ಯವಲ್ಲದ ಬಸ್ ವಿರುದ್ಧ ಕ್ರಮಕ್ಕೆ ಸಿಎಂ ಸೂಚಿಸಿದ್ದರು. ಆದರೆ ಆರ್ ಟಿಓ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದ್ದು, ಸಾರಿಗೆ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: