ಪ್ರಮುಖ ಸುದ್ದಿಮೈಸೂರು

ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ.30.

ಗಂಗಾವತಿಯ ಶರಣಪ್ಪ ಎನ್.ಮೆಟ್ರಿಯವರಿಗೆ ಪ್ರಶಸ್ತಿ

ಮೈಸೂರು,ನ.27 ರೋಟರಿ ಮೈಸೂರು ಉತ್ತರ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಸಹಯೋಗದಲ್ಲಿ ‘ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ-2018’ ಅನ್ನು ದಿ.30ರ ಸಂಜೆ 6.30ಕ್ಕೆ ಜೆಎಲ್ ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಉದ್ಘಾಟನೆ : ಕೆಎಸ್ಓಯು ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್, ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಂ.ಕೆ.ನಂಜಯ್ಯ ಅಧ್ಯಕ್ಷತೆ.  ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಿ.ಎಸ್.ಎನ್.ಎಲ್ ವಿಶ್ರಾಂತ ತಾಂತ್ರಿಕ ಮೇಲ್ವಿಚಾರಕ ಶರಣ್ಣಪ್ಪ ಎನ್.ಮೆಟ್ರಿಯವರಿಗೆ ಪುಶಸ್ತಿ ನೀಡಿ ಸನ್ಮಾನಿಸಲಾಗುವುದು.

ಪರಿಚಯ : ಶರಣಪ್ಪ ಎನ್.ಮೆಟ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ 1958ರಲ್ಲಿ ಜನನ, ಪ್ರಾಥಮಿಕ ಹಾಗೂ ಪ್ರಾಢಶಾಲಾ ಶಿಕ್ಷಣ, ನಂತರ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಕರ್ನಾಟಕ ವಿವಿಯಲ್ಲಿ ಬಿ.ಕಾಂ ಪದವಿ.

1981ರಲ್ಲಿ ಪೋಸ್ಟ್ ಅಂಡ್ ಟೆಲಿಗ್ರಾಫ್ ಇಲಾಖೆಯಲ್ಲಿ ಸೇವೇ ಆರಂಭ, ಯಾದಗಿರಿ ವಿಭಾಗೀಯ ತಾಂತ್ರಿಕ ಕಚೇರಿಯಲ್ಲಿ ನಂತರ ಬೆಳಗಾವಿಯ ಕೇಂದ್ರೀಯ ತಾಂತ್ರಿಕ ಕಚೇರಿ, ಗಂಗಾವತಿ ವಿಭಾಗೀಯ ತಾಂತ್ರಿಕ  ನಂತರ ರಾಯಚೂರಿನ ಮುಖ್ಯ ಕಚೇರಿಯ ಗ್ರಾಹಕರ ಸೇವಾ ಕೇಂದ್ರದಲ್ಲಿ ಅಲ್ಲಿಂದ ಬಿಎಸ್ಎನ್. ಎಲ್ ಗ್ರಾಹಕ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ.

ಇವರ ರಚನೆ ಎಮ್ಮೆತ್ತಮ್ಮನ ಕಗ್ಗ ಎಂಬ ಚೌಪದಿರೂಪದ ಮುಕ್ತಕ ಜಾಡಿನಲ್ಲಿ ರಚಿತವಾಗಿರುವ ಕೃತಿಗೆ ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ.   (ಕೆ.ಎಂ.ಆರ್)

Leave a Reply

comments

Related Articles

error: