ಪ್ರಮುಖ ಸುದ್ದಿಮೈಸೂರು

ಡಿ.1,2ರಂದು ಸ್ವದೇಶಿ ದಿವಸ್ ದಿನಾಚರಣೆ : ರಾಜ್ಯ ಸಮ್ಮೇಳನ

ವಿದ್ವಾಂಸರಿಂದ ವಿಚಾರಗೋಷ್ಠಿ

ಮೈಸೂರು,ನ.28 : ಆಜಾದಿ ಬಚಾವೋ ಆಂದೋಲನ ರಾಜ್ಯ ಘಟಕದ ವತಿಯಿಂದ ‘ಸ್ವದೇಶಿ ದಿವಸ್ ದಿನಾಚರಣೆ ಅಂಗವಾಗಿ 4ನೇ ರಾಜ್ಯ ಸಮ್ಮೇಳನವನ್ನು ಡಿ.1 ಮತ್ತು 2ರಂದು ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಸುಧೀಂದ್ರ ತಿಳಿಸಿದರು.

ಆಜಾದಿ ಬಚಾವೋ ಆಂದೋಲನ ಸಂಘಟನೆ ಸಂಸ್ಥಾಪಕ ದಿ.ರಾಜೀವ್ ದೀಕ್ಷಿತ್ ಅವರ ವಿಚಾರಗಳ ಪ್ರಸ್ತುತತೆ ಮತ್ತು ಅವಶ್ಯಕತೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ವಿಚಾರಗೋಷ್ಠಿಗಳನ್ನು ನಡೆಸಲಾಗುವುದು, ಡಿ.1ರ ಬೆಳಗ್ಗೆ 10 ಗಂಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಹಿರಿಯ ಕಾರ್ಯಕರ್ತರಾದ ಹೀರಾಲಾಲ್ ಶರ್ಮ, ಜಸವೀರ್ ಸಿಂಗ್ ಉಪಸ್ಥಿತರಿರಲಿದ್ದಾರೆ.

ನಂತರ ನಡೆಯುವ ಗೋಷ್ಠಿಗಳಲ್ಲಿ ಪುತ್ತೂರಿನ ಮೈತ್ರೇಯಿ ಗುರುಕುಲದ ಅಮೃತವರ್ಷಿಣಿ ಉಮೇಶ್ ಅವರು ‘ದೇಶಿ ಶಿಕ್ಷಣ ವ್ಯವಸ್ಥೆ’ ಬಗ್ಗೆ, ರುಡ್ ಸೆಟ್ ತರಬೇತುಗಾರ್ತಿ ಸುಧಾಮಣಿ ಅವರು ‘ಸ್ವದೇಶಿ ವಸ್ತುಗಳ ತಯಾರಿಕೆಯ ಕಲಿಕೆ’ ನಂತರ ಚೆನ್ನೈನ ಭಾರತಜ್ಞಾನ್ ಸಂಸ್ಥೆಯ ಡಿ.ಕೆ.ಹರಿ ಹಾಗೂ ಹೇಮ ಹರಿ ಅವರು ಭಾರತಜ್ಞಾನ-ನಾಗರೀಕತೆಯ ಅಧ್ಯಯನಗಳು’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಡಿ.2ರಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಗೋಷ್ಠಿಯಲ್ಲಿ ‘ಜೀವನ ಮೌಲ್ಯಗಳು’ ವಿಷಯವಾಗಿ ಹಿರಿಯ ವಿದ್ವಾಂಸ ಹಿರೇಮಗಳೂರು ಕಣ್ಣನ್, ವಿಷಮುಕ್ತ ಆಹಾರ ಉತ್ಪಾದನೆ ಬಗ್ಗೆ ಗುರುಪ್ರಸಾದ್ ಮತ್ತು ಮೆಟಿಲ್ಡಾ ಮೋನಿಸ್. ಮೈಸೂರು ಆಕಾಶವಾಣಿಯ ಕೇಶವಮೂರ್ತಿ ಅವರು ‘ಕೃಷಿಕರು, ನಗರವಾಸಿಗಳು ಹಾಗೂ ರೈತ ನಾಗರೀಕರ ಮಾರುಕಟ್ಟೆ ಬಗ್ಗೆ, ನಿವೃತ್ತ ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ‘ದೇಶ ಹಾಗು ನಾವು’ ವಿಷಯವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಸಂಚಾಲಕರಾದ ನವರತನ್, ರಾಮಚಂದ್ರ ಗುಪ್ತಾ, ಪ್ರಸನ್ನಕುಮಾರ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: