ಸುದ್ದಿ ಸಂಕ್ಷಿಪ್ತ

ನ.28 ರಂದು ಸೆಸ್ಕ್ ಜನ ಸಂಪರ್ಕ ಸಭೆ

ಮಂಡ್ಯ (ನ.28): ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಂಡ್ಯ ಉಪ ವಿಭಾಗ, ಕೊತ್ತತ್ತಿ ಉಪ ವಿಭಾಗ ಮತ್ತು ಕೆರಗೋಡು ಉಪ-ವಿಭಾಗದ ವ್ಯಾಪ್ತಿಯಲ್ಲಿರುವ ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚಿಸಲು ವಿದ್ಯುತ್ ಗ್ರಾಹಕರ ಕುಂದು ಕೊರತೆ ವಿಚಾರಣೆ ಸಭೆಯನ್ನು ಅಧೀಕ್ಷಕ ಇಂಜಿಯರ್ ಅವರ ಅಧ್ಯಕ್ಷತೆಯಲ್ಲಿ ನ.28ರಂದು ಬೆಳಿಗ್ಗೆ 11 ಗಂಟೆಗೆ ಕೆರಗೋಡು ಉಪವಿಭಾಗದ ಆವರಣದಲ್ಲಿ ನಡೆಸಲಾಗುವುದು.

ಮಂಡ್ಯ ಉಪ ವಿಭಾಗ, ಕೊತ್ತತ್ತಿ ಉಪ ವಿಭಾಗ ಮತ್ತು ಕೆರಗೋಡು ಉಪ-ವಿಭಾಗದ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಲು ಕೋರಿದೆ. (ಎನ್.ಬಿ)

Leave a Reply

comments

Related Articles

error: