
ಮೈಸೂರು
ಗಣರಾಜ್ಯೋತ್ಸವ ಪರೇಡ್’ಗೆ ಆಯ್ಕೆ
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್ ವಾಣಿಜ್ಯ, ಕಲಾ, ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್’ನಲ್ಲಿ ಪಾಲ್ಗೊಳ್ಳಲಿದ್ದಾರೆ.
2/14 ಎನ್.ಸಿ.ಸಿ ಕರ್ನಾಟಕ ಬೆಟಾಲಿಯನ್ನಿಂದ ಜೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಸಾರ್ಜಂಟ್ ಹರ್ಷಿತಾ ಜೀವನ್ ಮತ್ತು ಸಾರ್ಜಂಟ್ ಸಂದೇಶ್ ಎಸ್ ಪಾಟೀಲ್ ದ್ವಿತೀಯ ಬಿ.ಎಸ್ಸಿ ಹಾಗೂ ಸಾರ್ಜಂಟ್ ಧ್ರುವಕುಮಾರ್ ಬಿ.ಎನ್, ದ್ವಿತೀಯ ಬಿ.ಬಿ.ಎಂ ಜ. 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ಈಗ ಅವರು ಸದರಿ ಶಿಬಿರದಲ್ಲಿ ಭಾಗವಹಿಸಲು ನವದೆಹಲಿಗೆ ತೆರಳಿದ್ದಾರೆ. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರು, ಪ್ರಾಂಶುಪಾಲರು, ಎನ್ಸಿಸಿ ಅಧಿಕಾರಿಗಳು, ಅಧ್ಯಾಪಕ -ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿ ವೃಂದದವರು ಅವರಿಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿರುತ್ತಾರೆ.