ಮೈಸೂರು

ಜೀಪುಗಳ ಬದಲು ಪಹರೆಗಿಳಿಯಲಿದೆ ಮಾರುತಿ ಎರಿಟಿಗಾ

van-web-2ಮೈಸೂರಿನಲ್ಲಿ ಇಷ್ಟು ದಿನ ಗರುಡಾ ಜೀಪುಗಳು ಪಹರೆಗೆ ರಸ್ತೆಗಿಳಿಯುತ್ತಿದ್ದವು. ಇನ್ನು ಮುಂದೆ ಮಾರುತಿ ಎರಿಟಿಗಾ ಕಾರುಗಳು ಪಹರೆಗಿಳಿಯಲಿವೆ.

ಹಳೆಯ ಗರುಡ ವಾಹನಗಳಾದ ಜೀಪು ಇನ್ನು ಮುಂದೆ ಮೂಲೆಗುಂಪಾಗುತ್ತಿದ್ದು, ಹೊಸ ಮಾರುತಿ ಎರಿಟಿಗಾ ಕಾರುಗಳನ್ನು ಜೀಪುಗಳ ಬದಲು ಉಪಯೋಗಿಸಿಕೊಳ್ಳಲಾಗುತ್ತದೆ.

ಈಗಾಗಲೇ 25 ಹೊಸ ಎರಿಟಿಗಾ ಕಾರುಗಳು ಮೈಸೂರು ಘಟಕಕ್ಕೆ ಬಂದಿದ್ದು, ಸಿಎಆರ್ ಮೈದಾನದಲ್ಲಿ ಪಹರೆಗೆ ಸಜ್ಜಾಗಿ ನಿಂತಿವೆ. ಇನ್ನೂ ನೋಂದಣಿಯಾಗದ ಬಿಳಿ ಬಣ್ಣದ ವಾಹನಗಳ ಮೇಲೆ ಮೈಸೂರು ನಗರ ಪೊಲೀಸ್ ಗರುಡಾ ಸೇರಿದಂತೆ ಹಲವು ಮಾಹಿತಿಗಳನ್ನು ನಮೂದಿಸಲಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿ, ಗರುಡಾ ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರ ಅವಗಾಹನೆಗಾಗಿ ನೀಡಲಾಗಿದೆ.

ನೋಂದಣಿಯಾದ ಬಳಿಕ ಪ್ರತಿ ಠಾಣೆಗೆ ಒಂದಂರಂತೆ 18 ವಾಹನಗಳನ್ನು ನೀಡಲಾಗುತ್ತಿದ್ದು, ಸರಸ್ವತಿಪುರಂ, ಕುವೆಂಪುನಗರ, ಅಶೋಕಪುರಂ ಠಾಣಾ ಇನ್ಸಪೆಕ್ಟರ್ ಗಳಿಗೆ ಹಾಗೂ ಪಿಸಿಆರ್ ಗಳಿಗೆ ಉಳಿದ ವಾಹನಗಳನ್ನು ಬಳಸುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಶಸ್ತ್ರ ಮೀಸಲು ಪಡೆಗೂ ಮೂರು ಮಹೀಂದ್ರಾ ವ್ಯಾನುಗಳನ್ನು ತರಿಸಲಾಗಿದ್ದು, ರಕ್ಷಣೆಗಾಗಿ ಇದರ ಕಿಟಕಿಗಳಿಗೆ ಕಬ್ಬಿಣದ ಜಾಲರಿಗಳನ್ನು ಅಳವಡಿಸಲಾಗಿದೆ. ಗಲಭೆಗಳುಂಟಾದ ಸಂದರ್ಭ ಪರಿಸ್ಥಿತಿ ನಿಯಂತ್ರಿಸಲು ಈ ವಾಹನಗಳು ಬಳಕೆಯಾಗಲಿವೆ.

Leave a Reply

comments

Related Articles

error: