ಮೈಸೂರು

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ : ಕಾರ್ಯಾಗಾರ

ಮೈಸೂರು,ನ.27 : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಹಾಗೂ ಇಂಟರ್ ನ್ಯಾಷನಲ್ ಕಾಪರ್ ಅಸೋಸಿಯೇಷನ್ ಇಂಡಿಯಾ, ನವದೆಹಲಿ ಸಹಯೋಗದೊಂದಿಗೆ ವಿದ್ಯುತ್ ಕ್ಷಮತೆಯ ಪಂಪ್ ಗಳು, ಮೋಟಾರುಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಬಗ್ಗೆ ಸರ್ಕಾರಿ ಇಂಜಿನಿಯರ್ ಹಾಗೂ ಕೈಗಾರಿಕೆಗಳಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಇಂಟರ್ ನ್ಯಾಷನಲ್ ಕಾಫರ್ ಅಸೋಸಿಯೇಷನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ರಂಜನ್ ಉದ್ಘಾಟಿಸಿ ಮಾತನಾಡಿದರು.

ಕೆ.ಆರ್.ಇಡಿಎಲ್ ಡಿ.ಕೆ.ಯೋಜನಾ ಅಭಿಯಂತರ ದಿನೇಶ್ ಕುಮಾರ್, ಐಸಿಎಐ ನಿರ್ದೇಶಕ ಮಾನಸ ಕುಂದೂರು ಯೋಜನಾ ಸಲಹೆಗಾರ ಎ.ಎಸ್.ವೆಂಕಟಕೃಷ್ಣ ಉಪಸ್ಥಿತರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: