ಕರ್ನಾಟಕ

ಅತ್ಯಂಕ್ರಿಯೆ ವೇಳೆ ಜನರ ಸಹಕಾರಕ್ಕೆ ಹೆಚ್.ಎಸ್.ಪಿ. ಕುಟುಂಬ ಕೃತಜ್ಞತೆ

ಹಾಸನ (ನ.29): ಶಾಸಕರಾದ ಹೆಚ್.ಎಸ್. ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸಹಕರಿಸಿದ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಮತ್ತು ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳಿಗೆ ಅವರ ಕುಟುಂಬ ವರ್ಗ ಕೃತಜ್ಞತೆ ಸಲ್ಲಿಸಿದೆ.

ಸಾವಿನ ಸುದ್ದಿ ತಿಳಿದಾಗಿನಿಂದ ಅಂತಿಮ ಸಂಸ್ಕಾರ ಮುಗಿಯುವವರೆಗೆ ಎಲ್ಲಾ ರೀತಿಯ ಸಹಕಾರ, ಸಾರ್ವಜನಿಕ ದರ್ಶನಕ್ಕೆ ಅವಕಾಶ, ಪೊಲೀಸ್ ಭದ್ರತೆ ಸರ್ಕಾರಿ ಗೌರವ ಎಲ್ಲಾವನ್ನು ನೀಡಲಾಗಿದ್ದು ಇದಕ್ಕಾಗಿ ಹೆಚ್.ಎಸ್. ಪ್ರಕಾಶ್ ಅವರ ಪತ್ನಿ, ಮಕ್ಕಳು ಹಾಗೂ ಸಹೋದರರು ಎಲ್ಲಾರಿಗೂ ಕೃತಜ್ಞತೆ ಸಮರ್ಪಿಸುವುದಾಗಿ ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: