
ಪ್ರಮುಖ ಸುದ್ದಿ
ಜನಸಾಮಾನ್ಯರನ್ನು ಸತಾಯಿಸದೇ ಬದ್ಧತೆಯಿಂದ ಕೆಲಸ ಮಾಡುವಂತೆ ಕಿವಿಮಾತು
ರಾಜ್ಯ(ಮಂಡ್ಯ)ನ.29:- ಕೃಷ್ಣರಾಜಪೇಟೆ ಪುರಸಭೆಯ ತುರ್ತು ಸಭೆಯು ಅಧ್ಯಕ್ಷೆ ರತ್ನಮ್ಮ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಸ್ವರ್ಣಜಯಂತಿ ಶಹರಿ ರೋಜ್ ಗಾರ್ ಯೋಜನಾ ಭವನದಲ್ಲಿ ನಡೆಯಿತು.
ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಪಕ್ಷಾತೀತವಾಗಿ ದುಡಿಯುವುದಾಗಿ ತಿಳಿಸಿದ ರತ್ನಮ್ಮ ಮುಖ್ಯಾಧಿಕಾರಿಗಳು ನೌಕರರು ಹಾಗೂ ಸಿಬ್ಬಂದಿಗಳನ್ನು ಹತೋಟಿಯಲ್ಲಿಟ್ಟುಕೊಂಡು ಜನಸಾಮಾನ್ಯರನ್ನು ಸತಾಯಿಸದೇ ಬದ್ಧತೆಯಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ರೂಪ, ಹಿರಿಯ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಎಸ್.ಸಂತೋಷ್, ಹೆಚ್.ಆರ್.ಲೋಕೇಶ್, ಮಹಾದೇವಿ, ನಾಗರಾಜು, ದಿನೇಶ್, ಚಕ್ರಪಾಣಿ, ಕೆ.ಗೌಸ್ ಖಾನ್, ಅಶೋಕ್, ಪದ್ಮಾವತಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಬೀದಿ ನಾಯಿಗಳ ಹಾವಳಿಯ ನಿಯಂತ್ರಣ, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ನಿರ್ವಹಣೆಗೆ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡುವಂತೆ ಅಧ್ಯಕ್ಷೆ ರತ್ನಮ್ಮ ನಿರ್ದೇಶನ ನೀಡಿದರು. (ಕೆ.ಎಸ್,ಎಸ್.ಎಚ್)