ಪ್ರಮುಖ ಸುದ್ದಿ

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಮಂದಿ ಪ್ರಗತಿಪರ ರೈತರಿಗೆ ಮಣ್ಣಿನ ಮಗ ಪ್ರಶಸ್ತಿ

ರಾಜ್ಯ(ಬೆಂಗಳೂರು)ನ.29:-  ಕನ್ನಡದ ಮೊದಲ ಇನ್‌ ಫೋಟೇನ್ಮೆಂಟ್ ಚಾನೆಲ್ ಸರಳ ಜೀವನ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಮಂದಿ ಪ್ರಗತಿಪರ ರೈತರಿಗೆ  ಮಣ್ಣಿನ ಮಗ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

ಧಾರವಾಡದ ಬಸವರಾಜ, ಬೆಂಗಳೂರಿನ ನಾಗರಾಜ, ದೊಡ್ಡಬಳ್ಳಾಪುರದ ಜಯರಾಮಯ್ಯ, ರಾಯಚೂರಿನ ಕವಿತಾ ಮಿಶ್ರಾ, ಚಿತ್ರದುರ್ಗದ ಹನುಮಂತಪ್ಪ, ವಿಜಯಪುರದ ಬಸಂತರಾಯ, ಕೋಲಾರದ ನಾರಾಯಣಪ್ಪ, ಶ್ರೀರಂಗಪಟ್ಟಣದ ಹರ್ಷವರ್ಧನ, ಮೈಸೂರಿನ ಸುರೇಶ್ ಮತ್ತು ಯಾದಗಿರಿಯ ಮಲ್ಲಿಕಾರ್ಜುನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿಷ್ಠಿತ ಪ್ರಶಸ್ತಿಗಳನ್ನು ಧಾತ್ರಿ ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ಪ್ರಾಯೋಜಕತ್ವದಡಿ ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ, 2 ರಂದು ಸರಳ ಜೀವನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕೃಷಿ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸಿಜಿ ಪರಿವಾರ್ ರೂಪ್‌ನ ಅಧ್ಯಕ್ಷ ಡಾ. ಚಂದ್ರಶೇಖರ್ ಗುರೂಜಿ ಮಾತನಾಡಿ, ದೇಶದಲ್ಲಿ ಕೃಷಿ ಕ್ಷೇತ್ರ ಅತಿದೊಡ್ಡ ಕ್ಷೇತ್ರವಾಗಿದ್ದು, ಶೇ.50 ಕ್ಕೂ ಹೆಚ್ಚು ಉದ್ಯೋಗ ನೀಡಿದೆ. ಆವಿಷ್ಕಾರಕ ರೈತರನ್ನು ಗುರುತಿಸುತ್ತಿರುವ ಪ್ರಮಾಣ ಕಡಿಮೆ ಇದೆ. ಈ ನಿಟ್ಟಿನಲ್ಲಿ ಅಂತಹ ಕೃಷಿಕರನ್ನು ಗುರುತಿಸಿ ಲಕ್ಷಾಂತರ ಟಿವಿ ವೀಕ್ಷಕರ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ಮೂಲಕ ರೈತರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೇ, ಇಂತಹ ರೈತರು ಲಕ್ಷಾಂತರ ಜನರಿಗೆ ಪ್ರೇರಕಶಕ್ತಿಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸರಳ ಜೀವನದ ಬ್ಯುಸಿನೆಸ್ ಹೆಡ್ ರಘುನಾಥ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: