ಪ್ರಮುಖ ಸುದ್ದಿಮೈಸೂರು

ಡಿ.1,2ರಂದು ಲಯನ್ಸ್ ಕ್ಲಬ್ ವತಿಯಿಂದ ‘ದೈಹಿಕ ಯೋಗಕ್ಷೇಮದ ಬೃಹತ್ ಮೇಳ’

ಮೈಸೂರು,ನ.29 : ಮೈಸೂರು ಪಶ್ಚಿಮ ಲಯನ್ಸ್ ಕ್ಲಬ್ ವತಿಯಿಂದ ಡಿ. ಒಂದು ಮತ್ತು ಎರಡರಂದು ನಗರದ ಜೆ.ಕೆ. ಮೈದಾನದಲ್ಲಿನ ಪ್ಲಾಟಿನಂ ಜ್ಯೂಬಿಲಿ ಹಾಲ್ ಹಾಗೂ ಮೈದಾನದಲ್ಲಿ ಮಾನಸಿಕ, ದೈಹಿಕ, ಮತ್ತು ಯೋಗಕ್ಷೇಮ ಕುರಿತಂತೆ ಬೃಹತ್ ಮೇಳ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷರಾದ ಧರ್ಮೇಂದ್ರ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.1 ಸಂಜೆ 6ಕ್ಕೆ ಖ್ಯಾತ ಕವಿ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಅವರ ರಚಿಸಿರುವ ಕೆಲವು ಅಪರೂಪದ ಆಯ್ದ ಹಾಡುಗಳ ಸಂಗೀತ ರಸಸಂಜೆ ಕಾರ್ಯಕ್ರಮವಿದ್ದು, ಶಾಸಕ ಎಲ್. ನಾಗೇಂದ್ರ ಅತಿಥಿಗಳಾಗಿರುವರು. ಇದೇ ದಿನ ಬೆಳಗ್ಗೆ ಯೋಗಾಸನಾ, ಅಡುಗೆ ಹಾಗೂ ನೃತ್ಯ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಮಾರನೇ ದಿನ ಬೆಳಗ್ಗೆ 6.30ಕ್ಕೆ ಆರೋಗ್ಯ ನಡಿಗೆ ಕಾರ್ಯಕ್ರಮವಿದ್ದು, ಮಾಜಿ ಶಾಸಕ ವಾಸು ಚಾಲನೆ ನೀಡುವರು. ಇನ್ನು ಇದೇ ಸಂದರ್ಭದಲ್ಲಿ, ಮಕ್ಕಳಿಗೆ ಚಿತ್ರ ರಚನಾ ಸ್ಪರ್ಧೆ, ಉದ್ಯೋಗ ಮಾರ್ಗದರ್ಶಿ ಕಾರ್ಯಕ್ರಮ, ಕೆಲ ಉತ್ಪನ್ನಗಳಿಗೆ ಮಾರುಕಟ್ಟೆ ಮಳಿಗೆ, ಪರೀಕ್ಷೆ ಎದುರಿಸುವುದು ಹೇಗೆ ಎಂಬ ಇನ್ನಿತರ ಕಾರ್ಯಕ್ರಮಗಳೂ ಇರಲಿವೆ.

ಬಡವರ್ಗದವರಿಗೆ ಶೇ. 50 ರ ದರದಲ್ಲಿ ಡಯಾಲಿಸಿಸ್ ಸೌಲಭ್ಯದ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ಇದುವರೆಗೆ ಒಟ್ಟು ಹತ್ತು ಸಾವಿರ ಮಂದಿಗೆ ನೆರವಾಗಿದ್ದು, ಮಿಷನ್, ಬೃಂದಾವನ್, ಗೋಪಾಲಗೌಡ ಆಸ್ಪತ್ರೆಗಳ ತಮ್ಮೊಡನೆ ಕೈಜೋಡಿಸಿವೆ ಎಂದು ಮಾಹಿತಿ ನೀಡಿದರು.

ಇದಕ್ಕಾಗಿ ದೇಣಿಗೆ ಸಂಗ್ರಹಿಸಲು 500 ರೂ, 300 ರೂ. ಹಾಗೂ 100 ರೂ.ಗಳ ಡೋನರ್ಸ್ ಪಾಸ್‌ಗಳನ್ನು ಕೆಲವೊಂದು ಕಾರ್ಯಕ್ರಮಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ನಾಗರಾಜನ್, ಡಾ. ಮಹೇಶ್‌ರಾವ್, ಗುರುರಾಜು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: