ಮೈಸೂರು

ವಿಕಲಚೇತನರ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಷ್ಠಾನಗೊಳಿಸುವಂತೆ ಮನವಿ

ಮೈಸೂರು,ನ.29:- ರಾಜ್ಯವ್ಯಾಪಿ ವಿಕಲಚೇತನರ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಷ್ಠಾನಗೊಳಿಸುವಂತೆ ಕ್ರಮ ಕೈಗೊಳ್ಳುವಂತೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಮಾನವ ಹಕ್ಕುಗಳ ಉಳಿವಿಗಾಗಿ ವಿಶೇಷ ಚೇತನರ ಪರವಾಗಿ 2016ರ ವಿಕಲಚೇತನರ ಕಾಯ್ದೆಯನ್ನು ಜಾರಿಗೆ ತಂದರೂ ಇದುವರೆಗೂ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿರುವುದಿಲ್ಲ. ರಾಜ್ಯವ್ಯಾಪಿ ವಿವಿಧ ಇಲಾಖೆಗಳಲ್ಲಿನ ವಿಕಲಚೇತನರಿಗೆ ಮೀಸಲಿರುವ ಖಾಲಿ ಹುದ್ದೆಗಳನ್ನು ವಿಕಲಚೇತನರ ಹಾಲಿ ಇರುವ ರೋಸ್ಟರ್ ನಿಯಮದಡಿಯಲ್ಲಿ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ವಿಕಲಚೇತನರಿಗೆ ಸ್ಥಳೀಯ ಆಡಳಿತಕ್ಕೆ ಸೇರಿದ ವಿವಿಧ ಇಲಾಖೆಗಳ ಶೇ.5ರಷ್ಟು ಅನುದಾನವನ್ನು ವಿಕಲಚೇತನರ ವಿವಿಧ ಪುನರ್ವಸತಿಗಳಿಗಾಗಿ ಬಳಕೆ ಮಾಡುವ ಕುರಿತು ಅಧಿಕಾರಿಗಳು ಸಭೆ ನಡೆಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಸಿಕ ಸಭೆ ನಡೆಸಿ ವಿಶೇಷ ಚೇತನರ ಹಕ್ಕುಗಳ ಉಳಿವಿಗೆ ಅನುಕೂಲವಾಗುವಂತೆ ಸೂಚಿಸಬೇಕು ಎಂದು ಜನಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ   ಪ್ರಸನ್ನ ಒತ್ತಾಯಿಸಿದ್ದಾರೆ.

ಈ ಸಂದರ್ಭ ಗೋಪಾಲಕೃಷ್ಣ ಕಂದೇಗಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: