ಪ್ರಮುಖ ಸುದ್ದಿಮೈಸೂರು

ವಿಶೇಷ ಚೇತನರಿಗಾಗಿ ವಿವಿಧ ಸೇವೆಗಳು : ಇಚ್ಚಿಸುವವರು ಸಂಪರ್ಕಿಸಿ

ಮೈಸೂರು, ನ.29 : ವಿಶೇಷ ಚೇತನರಿಗಾಗಿ ಶ್ರಮಿಸುತ್ತಿರುವ ತಮ್ಮ ಪ್ರಥಮ ಟ್ರಸ್ಟ್ ವಿವಿಧ ರೀತಿಯ ಸೌಲಭ್ಯಗಳನ್ನು ಅವರಿಗಾಗಿ ನೀಡುತ್ತಿದ್ದು, ಆಸಕ್ತರು ಪ್ರಯೋಜನ ಪಡೆಯಬೇಕೆಂದು ಸಂಸ್ಥೆಯ ಸಾಗರ್ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಸಂಸ್ಥೆ ವಿಶೇಷ ಚೇತನರಿಗೆ ವಾಕ್ ಭಾಷಾ ಚಿಕಿತ್ಸೆ, ಶ್ರವಣ ಪರೀಕ್ಷೆ ಮತ್ತು ಶ್ರವಣೋಪಕರಣ ವಿತರಣೆ, ಭೌತ ಚಿಕಿತ್ಸೆ, ವಿಶೇಷ ಶಾಲೆ, ಶೈಕ್ಷಣಿಕ ಕೌಶಲ್ಯ ತರಬೇತಿ, ವರ್ತನ ಮಾರ್ಪಾಡು ಚಿಕಿತ್ಸೆ, ಔದ್ಯೋಗಿಕ ಪುನರ್ವಸತಿ, ಕೈಗಾರಿಕಾಧಾರಿತ ಶ್ರವಣ ಪರೀಕ್ಷೆ, ಆಪ್ತ ಸಮಾಲೋಚನೆ ಮೊದಲಾದ ಸೌಲಭ್ಯ ಒದಗಿಸುತ್ತಿದೆ.

ಯಾವುದೇ ಲಾಭದ ಉದ್ದೇಶವಿಲ್ಲದೇ ವಿವಿಧ ಕ್ಷೇತ್ರಗಳಲ್ಲಿರುವವರು ಸ್ಥಾಪಿಸಿಕೊಂಡ ಸಂಸ್ಥೆ ಇದಾಗಿದ್ದು, ಸೇವೆಯೇ ಪ್ರಮುಖ ಗುರಿಯಾಗಿದೆ ಎಂದು ಮಾಹಿತಿ ನೀಡಿದರು. ಜೊತೆಗೆ, ಸೇವೆ ಪಡೆಯಬಯಸುವವರು ಜಯನಗರ ಎಂಟನೇ ಅಡ್ಡರಸ್ತೆ ರಾಯಲ್ ಶಾಲೆ ಹತ್ತಿರದ ಪ್ರಥಮ ಫೌಂಡೇಷನ್, ದೂ.  0821 – 9562666, 97400 27846  ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಪೂರ್ಣಿಮಾ, ದರ್ಶನ್, ಶಿಲ್ಪಶ್ರೀ ಹಾಜರಿದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: