
ಪ್ರಮುಖ ಸುದ್ದಿಮೈಸೂರು
ಡಿ.1ರಂದು ಪ್ರೊ.ಎಸ್.ಆರ್.ನಿರಂಜನ ಅಭಿನಂದನಾ ಸಮಾರಂಭ
ಮೈಸೂರು, ನ.29 : ಜೀವ ವಿಜ್ಞಾನ ಕ್ಷೇತ್ರದ ಕೊಡುಗೆಗಾಗಿ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಫೆಲೋಷಿಪ್ ಪಡೆದಿರುವ ಹಿನ್ನೆಲೆಯಲ್ಲಿ ಗುಲಬರ್ಗಾ ವಿವಿ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅವರನ್ನು ಅಭಿನಂದಿಸುವ ಸಲುವಾಗಿ ಡಿ. 1ರಂದು ಮಾನಸ ಗಂಗೋತ್ರಿ ರಾಣಿ ಬಹಾದ್ದೂರ್ ಸಭಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಡಾ. ವಸಂತಕುಮಾರ್ ತಿಮಕಾಪುರ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ನಿರಂಜನ ಅವರನ್ನು ಸನ್ಮಾನಿಸಲಿದ್ದು, ಪ್ರೊ.ಕೆ.ಎಸ್. ರಂಗಪ್ಪ ಮುಖ್ಯ ಅತಿಥಿಗಳಾಗಿರುವರು, ಪ್ರೊ.ಎಚ್.ಎ. ರಂಗನಾಥ್ ಸನ್ಮಾನದ ನುಡಿ ಆಡುವರು. ಪ್ರೊ.ಆರ್. ರಾಜಣ್ಣ ಹಾಗೂ ಉಪಸ್ಥಿತರರಿದ್ದು, ಪ್ರೊ.ಜಿ. ಹೇಮಂತ್ಕುಮಾರ್ ಅಧ್ಯಕ್ಷತೆ ವಹಿಸುವರೆಂದು ತಿಳಿಸಿದರು.
ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಈ ಫೆಲೋಷಿಪ್ಗೆ ಆಯ್ಕೆ ಮಾಡಿದ್ದು, ಅವರು ಪ್ರತಿಭಾನ್ವಿತ ಸಸ್ಯಶಾಸ್ತ್ರ ಹಾಗೂ ಜೈವಿಕ ಶಾಸ್ತ್ರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆಂದು ವಿವರಿಸಿದರು.
ಪ್ರೊ.ಎನ್.ಕೆ. ಲೋಕೇಶ್, ಡಾ.ಎಸ್. ಉಮೇಶ್, ಅಮೃತೇಶ್ ಹಾಜರಿದ್ದರು. (ವರದಿ : ಕೆ.ಎಂ.ಆರ್)