ಮೈಸೂರು

ಎಸ್.ಡಿ.ಎಂ.ಐ.ಎಂ.ಡಿ.ಯಲ್ಲಿ ರಾಷ್ಟ್ರೀಯ ಸಮ್ಮೇಳನ; ಜನವರಿ 6ಕ್ಕೆ

ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯವರು ಜನವರಿ 6 ರಂದು ‘ಉತ್ತಮ ಸಾಧನೆಯ ಕಡೆಗೆ ಹೆಜ್ಜೆ’ ಎಂಬ ವಿಷಯವನ್ನುಳ್ಳ, ‘ಕಾರ್ಯಾಚರಣೆ ನಿರ್ವಹಣೆ, ವಿಶ್ಲೇಷಣೆ ಮತ್ತು ಸಂಖ್ಯಾಶಾಸ್ತ್ರ ವಿಧಾನಗಳು’ ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದಾರೆ. ಶಿಕ್ಷಣ ತಜ್ಞರು, ಸಂಶೋಧನಾ ವಿದ್ಯಾರ್ಥಿಗಳು, ಉದ್ಯಮವರ್ಗದವರು, ಸಲಹೆಗಾರರು, ನಿರ್ವಹಣಾ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಲೇಖನಗಳನ್ನು ಈ ಸಮ್ಮೇಳನದಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆಯಿದೆ.

ಜನವರಿ 6, 2017 ರಂದು ಬೆಳಿಗ್ಗೆ ಹತ್ತು ಘಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಆರ್.ಸಿ. ಜಗದೀಶ್, ನಿರ್ದೇಶಕರು- ಗ್ಲೋಬಲ್ ಕಾಂಪಿಟೆನ್ಸ್ ಸೆಂಟರ್- ಸಿಮೆಂಟ್ ಉದ್ಯಮ, ಕ್ಲುಬರ್ ಲೂಬ್ರಿಕೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇವರು ಸಮ್ಮೇಳನದ ಪ್ರಮುಖ ಭಾಷಣವನ್ನು ಮಾಡಲಿದ್ದಾರೆ. ಡಾ. ಜೂಲಿಯನ್ ಗಾಸ್ಪರ್, ಆರ್ಥಿಕ ವಿಷಯದ ಕ್ಲಿನಿಕಲ್ ಪ್ರೊಫೆಸರ್ –  ಆಡಳಿತ ನಿರ್ದೇಶಕರು, ಸೆಂಟರ್ ಫಾರ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಟಡೀಸ್, ಮೇಸ್ ಬಿಸಿನೆಸ್ ಸ್ಕೂಲ್, ಟೆಕ್ಸಾಸ್ ಎ ಅಂಡ್ ಎಂ ವಿಶ್ವವಿದ್ಯಾನಿಲಯ, ಯು.ಎಸ್.ಎ – ಇವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಮ್ಮೇಳನದಲ್ಲಿ ಕಾರ್ಯಾಚರಣೆ ನಿರ್ವಹಣೆ, ವಿಶ್ಲೇಷಣೆ ಮತ್ತು ಸಂಖ್ಯಾಶಾಸ್ತ್ರ ವಿಧಾನಗಳು – ಈ ವಿಷಯಗಳ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉತ್ತಮ ಲೇಖನಗಳ ಪ್ರಸ್ತುತಿ, ಚಿಂತನೆ, ಸಂವಾದ ನಡೆಯುವ ನಿರೀಕ್ಷೆಯಿದೆ.

ಖ್ಯಾತ ಉದ್ಯಮಿ ಶ್ರೀ ಉಮೇಶ್ ಕೆ. ಶೆಣೈ, ಉಪಾಧ್ಯಕ್ಷರು- ಕಾರ್ಯಾಚರಣೆ, ಜೆ.ಕೆ. ಟೈರ್ಸ್ ಅಂಡ್ ಇಂಡಸ್ಟ್ರೀಸ್, ವಿ.ಟಿ.ಪಿ,  ಮೈಸೂರು – ಇವರು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ. ಡಾ.ಆರ್.ಜಗದೀಶ್, ಪ್ರಾಧ್ಯಾಪಕರು – ಕಾರ್ಯಾಚರಣೆ ನಿರ್ವಹಣೆ, ಎಸ್.ಡಿ.ಎಂ.ಐ.ಎಂ.ಡಿ – ಇವರು ವಿಶೇಷ ಅತಿಥಿಗಳಾಗಿರುತ್ತಾರೆ.

ಹೆಚ್ಚಿನ ವಿವರಗಳಿಗೆ ರೇಖಾ ಗಣಪತಿ, ಸಮ್ಮೇಳನದ ಕಾರ್ಯದರ್ಶಿ – ಇವರನ್ನು ಇಮೇಲ್ – [email protected]  ಅಥವಾ ಮೊಬೈಲ್ : 9742722906 ಮೂಲಕ ಸಂಪರ್ಕಿಸಬಹುದು.

Leave a Reply

comments

Related Articles

error: