ಸುದ್ದಿ ಸಂಕ್ಷಿಪ್ತ

ಡಿ.1 ರಂದು ಪ್ರಬಂಧ ಸ್ಪರ್ಧೆ

ಮೈಸೂರು,ನ.29-ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ಡಿ.1 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್. ಬಾಲಕಿಯರ  ಪ್ರೌಢಶಾಲೆಯಲ್ಲಿ ನಡೆಯಲಿದೆ.

ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕರು ಭಾಗವಹಿಸಬೇಕು. ಅಂದು ಬೆಳಿಗ್ಗೆ 10ಕ್ಕೆ ನಿಗಧಿತ ಶಾಲೆಯಲ್ಲಿ ಹಾಜರಾಗಿ ನೋಂದಣಿ ಮಾಡಿಕೊಳ್ಳುವುದುಪ್ರಬಂಧದಲ್ಲಿ 5 ವಿಷಯಗಳಿದ್ದು, ಸ್ಪರ್ಧೆಗೆ ಒಂದು ಗಂಟೆ ಮುಂಚಿತವಾಗಿ ನಿರ್ದಿಷ್ಟವಾದ ಒಂದು ವಿಷಯವನ್ನು ಪ್ರಕಟಿಸಲಾಗುವುದು.

ಪರಿಣಾಮಕಾರಿ ಬೋಧನೆಯಲ್ಲಿ ತಂತ್ರಜ್ಞಾನದ ಅಗತ್ಯತೆ, ಶಿಕ್ಷಕರ ವೃತ್ತಿ ಬೆಳವಣಿಗೆಯಲ್ಲಿ ತರಬೇತಿಗಳ ಅವಶ್ಯಕತೆ, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ನಾವಿನ್ಯತೆಯುತ ಚಟುವಟಿಕೆಗಳ ಪ್ರಾಮುಖ್ಯತೆ, ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ನೈತಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಶಾಲೆಯ ಪಾತ್ರ, ಶಾಲಾ ಶಿಕ್ಷಣಲದಲಿ ದೈಹಿಕ ಮತ್ತು ಆರೋಗ್ಯ ಶಿಕ್ಷಣದ ಮಹತ್ವ ಬಗ್ಗೆ ಪ್ರಬಂಧದ ವಿಷಯಗಳಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. 0821-2490025 ಅನ್ನು ಸಂಪರ್ಕಿಸುವುದು. (ಎಂ.ಎನ್)

Leave a Reply

comments

Related Articles

error: