ಮೈಸೂರು

ಜನಸ್ನೇಹಿಯಾಗಿ ಜನರ ಪರವಾಗಿ ಕಾರ್ಯನಿರ್ವಹಿಸಲು ಸಿಂಗಲ್ ವಿಂಡೋ ಸಿಸ್ಟಮ್ ಅಳವಡಿಸಲು ನಿರ್ಧರಿಸಲಾಗಿದೆ : ಸಚಿವ ಯು.ಟಿ.ಖಾದರ್

ಮೈಸೂರು,ನ.29:- ಕಾನೂನುಬದ್ಧವಾಗಿ ಜಾಗ ಮಾಡಿಕೊಡಲು ನಿಯಮಗಳನನ್ನು ರೂಪಿಸಿದ್ದೇವೆ . ಜನಸ್ನೇಹಿಯಾಗಿ ಜನರ ಪರವಾಗಿ ರಾಜ್ಯಾದ್ಯಂತ ಸಿಸ್ಟಮ್ ಅಳವಡಿಸಲು ತೀರ್ಮಾನಿಸಲಾಗಿದೆ ಅದುವೇ ಸಿಂಗಲ್ ವಿಂಡೋ ಸಿಸ್ಟಮ್.  ಇದು ಕಾರ್ಯನಿರ್ವಹಿಸುವ ವೈಖರಿ ನ್ಯಾಯಯುತವಾಗಿದೆ ಯಾವ ಜನರಿಗೂ ಅನ್ಯಾಯವಾಗುವುದಿಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು ಈ‌ ವಿಂಡೋ ಸಿಸ್ಟಮ್ ಗೆ ಆನ್ ಲೈನ್ ಅರ್ಜಿ ಹಾಕಿದಾಗ ಅದು ಸರಿ ಇದ್ದರೆ ಮಾತ್ರ ಅರ್ಜಿ ಸ್ವೀಕರಿಸುತ್ತದೆ ಇಲ್ಲವಾದರೆ ರಿಜೆಕ್ಟ್ ಮಾಡಿಬಿಡುತ್ತದೆ ಈ ಅರ್ಜಿ ಸರಿಯಾಗಿದ್ದರೆ ನಮ್ಮ ಇಲಾಖೆಯಿಂದಲೇ ಕಳಿಸಿ ನಂತರ ಎನ್. ಒ. ಸಿ ಕೊಡುತ್ತಾರೆ.

ಹಾಗೆಯೇ ಸ್ಪಾಟ್ ಇನ್ಫೆಕ್ಷನ್ ಮೂಲಕ ಆ ಡಿಪಾರ್ಟ್ಮೆಂಟ್ ಅಧಿಕಾರಿಗಳಿಗೆ ಸೂಚನೆ ನೀಡುತ್ತದೆ. ಅಧಿಕಾರಿಗಳು ಎಷ್ಟು ಸಮಯಕ್ಕೆ ಹೋಗುತ್ತಾರೆ, ಎಲ್ಲಿಂದ ಹೋರಟಿದ್ದರು ಎಂದೆಲ್ಲ ರೆಕಾರ್ಡ್ ಆಗಿರುತ್ತದೆ.  ಇದರಿಂದ ಅಧಿಕಾರಿಗಳು ಕುಳಿತಲ್ಲಿಯೇ  ಕಾರ್ಯ ನಿರ್ವಹಿಸಲಾಗುವುದಿಲ್ಲ ಮತ್ತು 30/40 ಸೈಟ್ ಕಟ್ಟುವವರು ಆನ್ ಲೈನ್ ನಲ್ಲಿ ಅರ್ಜಿ ತೆಗೆದುಕೊಳ್ಳಬಹುದು. ಇದಕ್ಕೆ ಕಂಪ್ಯೂಟರ್ ಲೈಸೆನ್ಸ್ ನೀಡುತ್ತದೆ. ನೀವೇ ಸ್ವಂತ ಜವಾಬ್ದಾರರಾಗಿರುತ್ತೀರಿ ಎಂದರು.

ಮೊಬೈಲ್ ಟವರ್ ರೇಡಿಯೇಷನ್ ಅನುಷ್ಠಾನ ಗೊಳಿಸಲು ಕೆಲವೊಂದು ನಿಯಮವಿದೆ.  ಮೊಬೈಲ್ ಟವರ್ ಕಟ್ಟುವವರು ಫೀಸ್ ನೀಡಬೇಕು. ವರ್ಷ ವರ್ಷ ಪ್ರಾಪರ್ಟಿ ಟ್ಯಾಕ್ಸ್ ಕೂಡ ಕಟ್ಟಬೇಕು. ಜೊತೆಗೆ ಶಬ್ದ ರಹಿತ ಜನರೇಟರ್ ಅನುಷ್ಠಾನಗೊಳಿಸಬೇಕು ಹಾಗೂ ಶಾಲೆ ಆಸ್ಪತ್ರೆಯಿಂದ 50 ಮೀಟರ್ ದೂರ ಕಟ್ಟಬೇಕು. ‌ ಇದರಿಂದ ಏನಾದರು ತೊಂದರೆ  ಆದರೆ ನ್ಯಾಯ ಕೊಡಿಸಲು ಡಿಸ್ಟ್ರಿಕ್ಟ್‌ ಲೆವೆಲ್ ಲಿಡ್ರೊಸೆಲ್ ಕಮಿಟಿ ಮಾಡಲಾಗಿದೆ.  ಇವರುಗಳು 3 ತಿಂಗಳೊಳಗೆ ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲವಾದರೆ ಲೈಸೆನ್ಸ್ ವಜಾ ಮಾಡಲಾಗುತ್ತದೆ. ಸಿದ್ದರಾಮಯ್ಯನವರು 3ಕೋಟಿಯಿಂದ 9ಕೋಟಿ ನೀಡಿದ್ದಾರೆ. ಟಾಸ್ಕ್ ಕೋರ್ಸ್ ಕಮಿಟಿಯವರು ಹೊಸ ಸಿಸ್ಟಮ್ ನ್ನು ನೀಡಿದ್ದಾರೆ.  ಜೊತೆಗೆ ದೇವರಾಜ ಕಟ್ಟಡ ಮತ್ತು ಲ್ಯಾನ್ಸ್ ಡೌನ್ ಬಿಲ್ಡಿಂಗ್ ನಿಂದ ಜನರಿಗೆ ಉಪಯೋಗ ಮಾಡಲು ಚರ್ಚೆ ಮಾಡಿ ನಿರ್ಧರಿಸುತ್ತೇವೆ.

ಕೊಡಗಿನ ನಿರಾಶ್ರಿತರಿಗೆ ಸಿ.ಎಂ ಜೊತೆ ಮಾತನಾಡಿ 10,000 ರೆಂಟ್ ನೀಡಲು ನಿರ್ಧರಿಸಿದ್ದೇವೆ  ಹಾಗೂ ಮನೆಯ ಜೊತೆ ಎಲ್ಲರಿಗೂ 50,000 ನೀಡುತ್ತಿದ್ದೇವೆ. 840 ಮನೆಗಳಿಗೆ 2 ಬೆಡ್ ರೂಮಿನ ಮನೆ ಕಟ್ಟಲು ತೀರ್ಮಾನಿಸಿದ್ದೇವೆ. ಅಪಾಯದ   ಅಂಚಿನ ಜಾಗದಲ್ಲಿರುವ ಮನೆಗಳಿಗೆ ಲ್ಯಾಂಡ್ ಕೂಡ ಗುರ್ತಿಸಿ ಮನೆ ಕಟ್ಟಲು  ಸಿ.ಎಂ ಜೊತೆ ಚರ್ಚಿಸಿ ಚಾಲನೆ ನೀಡಿದ್ದೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: