ಪ್ರಮುಖ ಸುದ್ದಿ

ಜಿಲ್ಲಾ ಯುವ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪಿ.ಪಿ.ಸುಕುಮಾರ್ ಆಯ್ಕೆ

ರಾಜ್ಯ(ಮಡಿಕೇರಿ) ನ. 29 :  – ಕೊಡಗು ಜಿಲ್ಲಾ ಯುವ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಡಿಕೇರಿ ತಾಲೂಕಿನ ಹಾಕತ್ತೂರು ತ್ತೊಂಬತ್ತುಮನೆಯ ತ್ರಿನೇತ್ರ ಯುವಕ ಸಂಘದ ಪಿ.ಪಿ.ಸುಕುಮಾರ್ ಹಾಗೂ ಕಾರ್ಯದರ್ಶಿಯಾಗಿ ತಾಳತ್ತಮನೆಯ ನೇತಾಜಿ ಯುವಕ ಸಂಘದ ಕೆ.ಕೆ.ಗಣೇಶ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸೋಮವಾರಪೇಟೆಯ ತಾಲೂಕಿನ ನೆಗ್ಗಳೆಯ  ವೀರಭದ್ರಶ್ವೇರ ಯುವಕ ಸಂಘದ ಎನ್.ಎಂ.ದಿವಾಕರ್ ಹಾಗೂ ವಿರಾಜಪೇಟೆಯ ಜೈ ಭೀಮ್ ಕಲಾ ಯುವಕ ಸಂಘದ ಎಸ್.ಟಿ.ಗಿರೀಶ್, ಸಹ ಕಾರ್ಯದರ್ಶಿಯಾಗಿ ಸೋಮವಾರಪೇಟೆಯ ವಿಜಯ ಪ್ರಕಾಶ್ ಯುವಕ ಸಂಘದ ಬಿ.ಬಿ.ಆದರ್ಶ್, ವಿರಾಜಪೇಟೆಯ ಬಿಳುಗುಂದ ಕಾವೇರಿ ಯುವತಿ ಮಂಡಳಿಯ ಇಂದು ನಾಣಯ್ಯ ಹಾಗೂ ಖಜಾಂಚಿಯಾಗಿ ಕಗ್ಗೋಡ್ಲು ಕಾವೇರಿ ಯುವಕ ಸಂಘದ ಕೆ.ಎಂ.ಮೋಹನ್ ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ವಿರಾಜಪೇಟೆಯ ಕಾವೇರಿ ಯುವತಿ ಮಂಡಳಿಯ ರಾಣಿಅಯ್ಯಪ್ಪ,  ಮಡಿಕೇರಿಯ ನೆಲ್ಲಕ್ಕಿ ಯುವತಿ ಮಂಡಳಿಯ ಕೇಕಡ ಇಂದುಮತಿ, ವಿರಾಜಪೇಟೆಯ ಸುಬ್ರಮಣಿ ಯುವತಿ ಮಂಡಳಿಯ ಎ.ಎ ಗೌರಮ್ಮ, ವಿರಾಜಪೇಟೆಯ ಇಂಡಿಯನ್ ಯುವಕ ಸಂಘದ ಸಿಗೆತೋಡುವಿನ ಕೆ. ಪ್ರಮೋದ್ ಗಣಪತಿ, ಮಡಿಕೇರಿಯ ನೇತಾಜಿ ಯುವಕ ಮಂಡಳಿಯ ಎ.ಆರ್.ನೇತ್ರಾವತಿ, ಸೋಮವಾರಪೇಟೆಯ ಬಸವೇಶ್ವರ ಯುವಕ ಸಂಘ ಶುಂಠಿಮಂಗಳೂರು ಎಂ.ಡಿ.ಹರೀಶ್, ಅಂಬೇಡ್ಕರ್ ಯುವಕ ಸಂಘ ಗೆಜ್ಜೆಹಣಕೋಡುವಿನ ಹೆಚ್.ಕೆ.ಮಹೇಶ್, ಸೋಮವಾರಪೇಟೆಯ ಶುಂಠಿಮಂಗಳೂರು ಪೂಜಾ ಯುವತಿ ಮಂಡಳಿಯ ಎಸ್.ಆರ್. ಶಿಲ್ಪಾ ಅವರುಗಳು ಆಯ್ಕೆಯಾಗಿದ್ದಾರೆ.

ಕೊಡಗು ಜಿಲ್ಲಾ ಯುವ ಒಕ್ಕೂಟದ ನಿರ್ಗಮಿತ ಅಧ್ಯಕ್ಷರಾದ ಎಂ.ಡಿ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಗರದ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯ ಮೊದಲಿಗೆ ಕಾರ್ಯದರ್ಶಿ ಇಂದುಮತಿ ಪ್ರಾರ್ಥಿಸಿದರೆ, ಕೆ.ಕೆ. ಗಣೇಶ್ ಸ್ವಾಗತಿಸಿದರು. ಕಳೆದ ವಾರ್ಷಿಕ ಮಹಾ ಸಭೆಯ ವರದಿಯನ್ನು ಸುಕುಮಾರ್ ಪಿ.ಪಿ. ವಾಚಿಸಿ, ಮಂಡಿಸಿದರು. ಲೆಕ್ಕಪತ್ರಗಳನ್ನು ಖಜಾಂಚಿ ರಾಣಿ ಅಯ್ಯಪ್ಪ ಮಂಡಿಸಿದರು.

ಕಳೆದ ಸಭಾ ಹಾಜರಾತಿಗಳನ್ನು ತನುಕುಮಾರ್ ವಾಚಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ವಿರಾಜಪೇಟೆಯ ತಾಲೂಕು ಯುವಕ ಒಕ್ಕೂಟದ ಅಧ್ಯಕ್ಷರಾದ ಶೀಲಾ ಬೋಪಣ್ಣ, ಸೋಮವಾರಪೇಟೆ ಒಕ್ಕೂಟದ ಅಧ್ಯಕ್ಷರಾದ ಚಂದ್ರಿಕಾ ಹಾಗೂ ಸಲಹೆಗಾರರಾದ ರಾಣಿಮಾಚಯ್ಯ ಉಪಸ್ಥಿತರಿದ್ದು, ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: