ಮೈಸೂರು

ಬ್ರಿಟಿಷರ ಪ್ರಭಾವದಿಂದ ಪಂಚಾಂಗಗಳು ಕ್ಯಾಲೆಂಡರ್ ಗಳಾಗಿ ಬದಲಾವಣೆ : ಎಸ್.ಎ.ರಾಮದಾಸ್

ಶ್ರೀ ಮಾಯಕಾರ ಗುರುಕುಲ ಮತ್ತು ಗುಪ್ತ ಆಫ್ ಸೆಟ್ ಪ್ರಿಂಟರ್ಸ್ ವತಿಯಿಂದ ಗುರುವಾರ ರೋಟರಿ ಸಭಾಂಗಣದಲ್ಲಿ 2017 ರ ದಿನಚರಿ ಮತ್ತು ಕ್ಯಾಲೆಂಡರ್ ಹಾಗೂ ಪ್ರಶ್ನತಂತ್ರಮ್ (2 ನೇ ಆವೃತ್ತಿ) ಕಿರುಗ‍್ರಂಥ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಭಾರತದಲ್ಲಿ 4 ಋತುಗಳನ್ನು ಮಾತ್ರ ತೋರಿಸುವ ದಿನಚರಿ ಇದೆ. ಆದರೆ ಚೀನಾದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ 5 ಕಾಲಗಳನ್ನು ತೋರಿಸುತ್ತಿದ್ದಾರೆ. ಭವಿಷ್ಯದ ವಿಚಾರಧಾರೆಗಳನ್ನು ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಭಾರತೀಯ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಶಾಸ್ತ್ರವನ್ನು ವಿಜ್ಞಾನ ಎಂದು ತಿಳಿಸಬೇಕಾಗಿದೆ  ಎಂದರು.

ಇಂದಿಗೂ ಸಹ ಆರ್ಯಭಟ, ಭಾಸ್ಕರರಂತಹ  ಖಗೋಳ ಶಾಸ್ತ್ರಜ್ಞರ ದಾರಿಯನ್ನು ಅನುಸರಿಸಿ ಹೋಗುತ್ತಿದ್ದೇವೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಪಂಚಾಂಗದ ಆಧಾರದ ಮೇಲೆ ಯುದ್ಧ ಮತ್ತಿತರ ಶುಭಕಾರ್ಯಗಳ ಮುಹೂರ್ತವನ್ನು ನಿಶ್ಚಯ ಮಾಡುತ್ತಿದ್ದರು. ನಂತರ ಬ್ರಿಟಿಷರ ಪ್ರಭಾವದಿಂದಾಗಿ ನಮ್ಮ ಹಿಂದೂ ಧರ್ಮದ ಪಂಚಾಂಗಗಳು ಕ್ಯಾಲೆಂಡರ್ ಗಳಾಗಿ ಬದಲಾವಣೆಯಾದವು. ಮೊಘಲರು ಮತ್ತು ಬ್ರಿಟಿಷರು ಹಿಂದೂ ಸಂಪ್ರದಾಯದ ಸಂಸ್ಕೃತಿಯನ್ನು ಹಾಳು ಮಾಡಿದರು. ಇಂಗ್ಲೀಷ್ ರಾಜರ ಹೆಸರುಗಳು ನಮ್ಮ ಭಾರತೀಯ ಕ್ಯಾಲೆಂಡರ್ ನ ತಿಂಗಳುಗಳಾಗಿ ಮಾರ್ಪಟ್ಟವು. ಒಟ್ಟು ಇರುವ 82 ಕ್ಯಾಲೆಂಡರ್ ಗಳಲ್ಲಿ 60 ಪಂಚಾಂಗಗಳು ಚಂದ್ರನ ಪಥದ ಆಧಾರದ ಮೇಲೆ, 20 ಪಂಚಾಂಗಗಳು ಸೂರ್ಯನ ಪಥದ ಆಧಾರದ ಮೇಲೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ ಹಿಂದೂ ಪಂಚಾಂಗದಲ್ಲಿ ವೈಜ್ಞಾನಿಕ ತಳಹದಿಯನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಶ್ರೀ ಮಾಯಕಾರ ಗುರುಕುಲ ಡೈರಿ, ಗುಪ್ತ ಆಫ್ ಸೆಟ್ ಪ್ರಿಂಟರ್ಸ್ ನ ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮತ್ತು ಡಾ.ಮೂಗೂರು ಮಧು ದೀಕ್ಷಿತ್ ರವರ ಪ್ರಶ್ನತಂತ್ರಮ್ ಕಿರುಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಮುಕ್ತ ವಿವಿಯ ಉಪ ಕುಲಸಚಿವ ಡಾ. ಶಲ್ವಪಿಳ್ಳೆ ಅಯ್ಯಂಗಾರ್,  ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ‍್ಯಕ್ಷ ಡಾ.ಭಾನುಪ್ರಕಾಶ್ ಶರ್ಮ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಭಾಗಿಯಾಗಿದ್ದರು.

ಭಾರತೀಯ ಕೃಷಿ ಸಮಾಜದ ರಾಜ್ಯ ಉಪಾಧ‍್ಯಕ್ಷ ಡಾ.ಎಂ.ಜಿ.ಆರ್.ಅರಸು ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಪ್ತ ಋಷಿ ಗುರುಕುಲದ ಅಧ‍್ಯಕ್ಷ ಡಾ.ಕುಮಾರ್ ವಶಿಷ್ಠ, ಕಾರ್ಯದರ್ಶಿ ಡಾ.ಬಾಲಸುಬ್ರಹ್ಮಣ್ಯ,  ಚಂದ್ರವನ ಆಶ್ರಮದ ವ್ಯವಸ್ಥಾಪಕ ಟಿ.ಪಿ.ಶಿವಕುಮಾರ್, ಮಾಯಕಾರ ಗುರುಕುಲದ ಡಾ.ಬಣಗಾರ್ ಚಂದ್ರಶೇಖರ್, ಗುಪ್ತ ಆಫ್ ಸೆಟ್ ಪ್ರಿಂಟರ್ಸ್ ನ ಮಾಲೀಕ ಎಂ.ಎಸ್.ರಾಮನಾಥ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: